ಸೊರಬ ತಾಲೂಕು ಕಟ್ಟಡ ಕಾರ್ಮಿಕರ ಹಾಗೂ ಅಸಂಟಿತ ಕಾರ್ಮಿಕರ ಒಕ್ಕೂಟದ ಸಭೆಯಲ್ಲಿ ಸುರಾ ಕಿಟ್ಗಳು ಕಳಪೆಯಾಗಿವೆ ಎಂದು ಪ್ರದರ್ಶಿಸಲಾಯಿತು. ಸಂಜಯ್ಕುಮಾರ್, ಪ್ರಭು ಮೇಸ್ತ್ರಿ, ಮೆಹಬೂಬ್ ಅಲಿ, ಇಾರ್ನ್ ಇತರರಿದ್ದರು.
- ಕಟ್ಟಡ ಹಾಗೂ ಅಸಂಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸಂಜಯ್ಕುಮಾರ್ ಆರೋಪ
- ಕಾರ್ಮಿಕ ಮಂಡಳಿಯ ಸುರಕ್ಷ ಕಿಟ್ಗಳು ಕಳಪೆ
ಸೊರಬ: ರಾಜ್ಯ ಕಟ್ಟಡ ಕಾರ್ಮಿಕರ ಮಂಡಳಿ ಅನಾವಶ್ಯವಾಗಿ ವ್ಯಯ ಮಾಡುತ್ತಿರುವ ಹಣವನ್ನು ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನೀಡಲು ಮುಂದಾಗಬೇಕು ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ತಾಲೂಕು ಕಟ್ಟಡ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಕಾರ್ಮಿಕ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ನೀಡಿರುವ ಸುರಕ್ಷ ಕಿಟ್ಗಳು ಕಳಪೆಯಾಗಿವೆ ಎಂದು ಕಿಟ್ಗಳನ್ನು ಪ್ರದರ್ಶಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರ ಮಂಡಳಿ ಕಳೆದ ಮೂರು ವರ್ಷಗಳಿಂದ ಬೇರೆ ಬೇರೆ ಟೆಂಡರ್ಗಳಲ್ಲಿ ಕಳಪೆ ಕಿಟ್ಗಳಿಗೆ ಅನಾವಶ್ಯಕವಾಗಿ ಹಣ ವ್ಯಯ ಮಾಡುತ್ತಿದೆ. ಈಗಾಗಲೇ ಇದಕ್ಕಾಗಿ 100 ಕೋಟಿ ರೂ. ಖರ್ಚು ಮಾಡಿದೆ. ಆದರೆ ಕಾರ್ಮಿಕರ ಮಕ್ಕಳಿಗಾಗಿ ಯಾವುದೇ ಸ್ಕಾಲರ್ಶಿಪ್ ನೀಡಲು ಮುಂದಾಗುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ ತರಬೇತಿ ನೀಡುತ್ತೇವೆ ಎನ್ನುವ ಮಂಡಳಿಯಿಂದ ಲಾನುಭವಿಗಳಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದರು.
ನಕಲಿ ಕಾರ್ಡ್ಗಳನ್ನು ತಡೆಗಟ್ಟಿ. ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಿ. ನಿಜವಾದ ಕಾರ್ಮಿಕರಿಗೆ ನ್ಯಾಯ ಒದಗಿಸಿ. ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಾರ್ಮಿಕ ನಿರೀಕರ ಕೊರತೆಯಿದೆ. ಈ ಹುದ್ದೆಗಳನ್ನು ಭರ್ತಿಮಾಡಲು ಸರ್ಕಾರ ಮುಂದಾಗಬೇಕು. ಕಾರ್ಡ್ಗಳನ್ನು ಖಾಸಗೀಕರಣ ಮಾಡಲು ಟೆಂಡರ್ಗೆ ಕೊಡಲು ಹೊರಟಿರುವುದನ್ನು ಮೊದಲು ತಡೆಯಬೇಕು. ಕಳೆದ ಕೆಲವು ವರ್ಷಗಳ ಹಿಂದೆ ನಡೆಸಿಕೊಂಡು ಬರುತ್ತಿದ್ದ ಬಾಲ ಮಂದಿರವನ್ನು ಸ್ಥಗಿತಗೊಳಿಸಲಾಗಿದೆ. ತಾಲೂಕುಗಳಲ್ಲಿ ಸಂಚರಿಸುವ ಸಂಚಾರಿ ಟಕದಿಂದ ಹಣ ವ್ಯಯವಾಗುತ್ತಿದೆ ಎಂದು ದೂರಿದರು.
ತಾಲೂಕು ಟಕದ ಅಧ್ಯ ವಿಕ್ರಂ ಮೇಸ್ತ್ರಿ ಮಾತನಾಡಿ, ಸಂದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಅರ್ಹರಲ್ಲದವರು ಸೌಲಭ್ಯ ಪಡೆಯುತ್ತಿದ್ದಾರೆ. ನಿಜವಾದ ಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತಿಲ್ಲ ಎಂದರು.
ಜಿಲ್ಲಾ ಉಪಾಧ್ಯ ಪ್ರಭು ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಅಲಿ, ಇಾರ್ನ್, ಈಶ್ವರಪ್ಪ, ಸಮೀವುಲ್ಲಾ, ಯಾಜ್, ನಿಸಾರ್ ಸಾಬ್, ಅನ್ಸರ್ ಸಾಬ್, ರಾವೇಂದ್ರ, ನಾಗರಾಜ್, ಜಾಕೀರ್ ಖಾನ್, ಜಗದೀಶ್, ನಾಗರಾಜ್, ಸತೀಶ್, ರೇಣುಕೇಶ್ ಮುಂತಾದವರಿದ್ದರು.