ಹತ್ಯೆಯಾದ ಸೀಗೇಹಟ್ಟಿಯ ಕುಳ್ಳಿ ಕಿರಣ್ 
ಶಿವಮೊಗ್ಗ

ರಾಮೇನಕೊಪ್ಪದಲ್ಲಿ ಚಾಕುವಿನಿಂದ ಇರಿದು ಕುಳ್ಳಿ ಕಿರಣ್ ಕೊಲೆ | Kulli Kiran murder

ಪ್ರಮುಖ ಮುಖ್ಯಾಂಶಗಳು

  • ಹಣಕಾಸಿನ ವಿಚಾರಕ್ಕೆ ಭಾನುವಾರ ಸಂಜೆ ಕೊಲೆ
  • ಸೀಗೇಹಟ್ಟಿಯ ಕುಳ್ಳಿ ಕಿರಣ್ ಹತ್ಯೆಯಾದ ಯುವಕ
  • ಎಸ್‌ಪಿ ಬಿ.ನಿಖಿಲ್ ಸೇರಿ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ
ಶಿವಮೊಗ್ಗ: ಹಣಕಾಸಿನ ವಿಚಾರ(Financial matters)ಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ ನಗರದ ಹೊರವಲಯದ ರಾಮೇನಕೊಪ್ಪ(Ramenakoppa)ದಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಸೀಗೇಹಟ್ಟಿಯ ಕುಳ್ಳಿ ಕಿರಣ್(32) ಹತ್ಯೆಯಾದ ಯುವಕ. ಮೂರ್ನಾಲ್ಕು ಯುವಕರ ಗುಂಪು ಕುಳ್ಳಿ ಕಿರಣ್ (Kulli kiran)ಮೇಲೆ ಚಾಕುವಿನಿಂದ ದಾಳಿ ಮಾಡಿದೆ. ರಾಮೇನಕೊಪ್ಪದ ಬಳಿ ಇಸ್ಪೀಟ್ ಆಡುತ್ತಿದ್ದ ವೇಳೆ ಅದೇ ಸ್ಥಳದಲ್ಲಿದ್ದ ಕೆಲವರು ದಾಳಿ ಮಾಡಿದ್ದಾರೆ. 
ಮೇಲ್ನೋಟಕ್ಕೆ ಹಣಕಾಸಿನ ವ್ಯವಹಾರದಿಂದ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ದಾಳಿ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಎಸ್‌ಪಿ ಬಿ.ನಿಖಿಲ್(Sp B.Nikhil) ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.