ಕೆಎಸ್‌ಆರ್‌ಪಿ 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಈರಣ್ಣ ಗುಡಾದಾರ್.
- 18 ದಿನಗಳ ಹಿಂದೆಯಷ್ಟೇ ವಿವಾಹ
- ಕೆಎಸ್‌ಆರ್‌ಪಿ 8ನೇ ಪಡೆಯ ಪೇದೆ
- ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು
ಶಿವಮೊಗ್ಗ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್‌ಆರ್‌ಪಿ) 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್(constable) ಈರಣ್ಣ ಗುಡಾದಾರ್(26) ವರ್ಷ ಅವರು ಮಂಗಳವಾರ ತೀವ್ರ ಹೃದಯಾಘಾತ(heart attack)ದಿಂದ ಮೃತಪಟ್ಟಿದ್ದಾರೆ.
ಮೂಲತಃ ಬೆಳಗಾವಿ(Belagavi) ಜಿಲ್ಲೆಯ ಗೋಕಾಕ್ ತಾಲೂಕಿನ ಈರಣ್ಣ ಕಳೆದ 7 ವರ್ಷಗಳಿಂದ ಶಿವಮೊಗ್ಗದ ಕೆಎಸ್‌ಆರ್‌ಪಿ 8ನೇ ಪಡೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದರು. ತೀವ್ರ ಹೃದಯಾಘಾತ ಸಂಭವಿಸಿದಾಗ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಈರಣ್ಣ ಅವರಿಗೆ 18 ದಿನಗಳ ಹಿಂದೆಯಷ್ಟೇ ವಿವಾಹ(Marreid)ವಾಗಿತ್ತು ಎನ್ನಲಾಗಿದ್ದು, ತಂದೆ, ತಾಯಿ, ಪತ್ನಿ ಹಾಗೂ ಸಹೋದರಿ ಇದ್ದಾರೆ.