ರಿಪ್ಪನ್ಪೇಟೆ ಸಮೀಪದ ಶಾಖವಳ್ಳಿ ಗ್ರಾಮದ ಮೃತ ಸುಮಾ ಅವರ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಿ.ಜಿ.ಚಂದ್ರಮೌಳಿ, ರಂಜಿತ್ಕುಮಾರ್ ಇತರರಿದ್ದರು.
- ಮೃತ ಸುಮಾ ಮನೆಗೆ ಕಿಮ್ಮನೆ ಭೇಟಿ
- ಕುಟುಂಬಸ್ಥರಿಗೆ ಸಾಂತ್ವನ
- ವೈಯುಕ್ತಿಕ ಧನ ಸಹಾಯ
ರಿಪ್ಪನ್ಪೇಟೆ: ಹೆರಿಗೆ ವೇಳೆ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ನಿಧನರಾದ ಕೋಡೂರು ಗ್ರಾಪಂ ವ್ಯಾಪ್ತಿಯ ಶಾಖವಳ್ಳಿ ಗ್ರಾಮದ ಸುಮಾ ಅವರ ಮನೆಗೆ ಸೋಮವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ವೈಯುಕ್ತಿಕ ಧನ ಸಹಾಯ ನೀಡಿದ ಅವರು, ಸಾವಿನ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಮುಖಂಡರಾದ ಬಿ.ಜಿ.ಚಂದ್ರಮೌಳಿ, ರಂಜಿತ್ಕುಮಾರ್, ವೇದಾಂತಪ್ಪ ಗೌಡ, ಅನಿಲ್ಕುಮಾರ್, ವಿಶ್ವನಾಥ, ಪೂರ್ಣೇಶ್, ಆಡಿನಸರ ಸತೀಶ್ ಇತರರಿದ್ದರು.