ಕೇರಳ ಲಾಟರಿ 
ಶಿವಮೊಗ್ಗ

ಕೇರಳ ಲಾಟರಿ ಹೆಸರಲ್ಲಿ ಶಿಕ್ಷಕಿಗೆ ವಂಚನೆ | Kerala Lottery

ಪ್ರಮುಖ ಮುಖ್ಯಾಂಶಗಳು

  • ತೀರ್ಥಹಳ್ಳಿ ತಾಲೂಕಿನ ಶಿಕ್ಷಕಿಯೊಬ್ಬರಿಗೆ 1.99 ಲಕ್ಷ ರೂ. ಮೋಸ
  • ಲಾಟರಿ ಹೆಸರಲ್ಲಿ ಕರೆ ಮಾಡಿದ್ದ ಅಪರಿಚಿತರು
  • ಶಿವಮೊಗ್ಗದ ಸೈಬರ್ ಠಾಣೆಯಲ್ಲಿ ದೂರು ದಾಖಲು
ಶಿವಮೊಗ್ಗ: ಕೇರಳ ಲಾಟರಿ(Kerala Lottery)ಹೆಸರಲ್ಲಿ ತೀರ್ಥಹಳ್ಳಿ ತಾಲೂಕಿನ ಶಿಕ್ಷಕಿಯೊಬ್ಬರಿಗೆ 1.99 ಲಕ್ಷ ರೂ. ವಂಚಿಸಲಾಗಿದೆ. 
28 ವರ್ಷದ ಶಿಕ್ಷಕಿಯ ಮೊಬೈಲ್ ಸಂಖ್ಯೆಗೆ ಮೇ 22ರಂದು ಕೇರಳ ಲಾಟರಿ ಹೆಸರಲ್ಲಿ ಅಪರಿಚಿತರು ಕರೆ (Unknown call)ಮಾಡಿದ್ದರು. 50 ರೂ.ನ ಎರಡು ಲಾಟರಿ ಖರೀದಿ ಮಾಡಿದ್ದರು. ಬಳಿಕ ಎರಡು ನಂಬರ್‌ನಿಂದ ವಾಟ್ಸ್‌ಆ್ಯಪ್‌ಗೆ ಲಾಟರಿ ಇಮೇಜ್(Lottery image for WhatsApp) ಕಳುಹಿಸಿ, ವಿತ್ ಡ್ರಾ ಮಾಡಬೇಕಾದರೆ ಟಿಡಿಎಸ್, ತೆರಿಗೆ ಹಾಗೂ ಇತರ ಕಾರಣ ಹೇಳಿ ಹಂತ ಹಂತವಾಗಿ 1,99,710 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ. 
ಈ ಬಗ್ಗೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ಸೈಬರ್ ಠಾಣೆ(Shivamogga Cyber Station)ಯಲ್ಲಿ ದೂರು ದಾಖಲಾಗಿದೆ.