ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ  
ಶಿವಮೊಗ್ಗ

ನ. 27ರಿಂದ ಕನ್ನಡ ರಾಜ್ಯೋತ್ಸವ, ಕ್ರೀಡೋತ್ಸವ Kannada Rajyotsava

ಶಿವಮೊಗ್ಗ: ನಗರದಲ್ಲಿ ನ. 27ರಿಂದ 29ರವರೆಗೆ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಅಧಿಕಾರಿ ಮತ್ತು ನೌಕರರ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗೂ ಕ್ರೀಡೋತ್ಸವ ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಶಿವಮೊಗ್ಗ: ನಗರದಲ್ಲಿ ನ. 27ರಿಂದ 29ರವರೆಗೆ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಅಧಿಕಾರಿ ಮತ್ತು ನೌಕರರ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗೂ ಕ್ರೀಡೋತ್ಸವ ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

27ರಂದು ಸಂಜೆ 5.30ಕ್ಕೆ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಪ್ರಹ್ಲಾದ ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಇಲಾಖೆ ಪ್ರಧಾನ ನಿರ್ದೇಶಕ ಎಸ್.ಎಂ.ರಾಮಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಕನ್ನಡ ನುಡಿಹಬ್ಬದ ಸಂದೇಶ ನೀಡುವರು. ಕರ್ನಾಟಕ ರಣಜಿ ತಂಡದ ಮಾಜಿ ಚಾಂಪಿಯನ್ ಆಟಗಾರ ಮಿಥುನ್ ಬಿರಾಲ ಕ್ರೀಡೋತ್ಸವ ಸಂದೇಶ ನೀಡುವರು. ಜಿಲ್ಲಾಧಿಕಾರಿ ಪ್ರಕಾಶ್ ನಿಟ್ಟಳಿ, ಜಿಪಂ ಸಿಇಒ ರಿಷಿ ಆನಂದ್ ಮುಖ್ಯ ಅತಿಥಿಯಾಗಿರುವರು. ಸಂಘದ ಅಧ್ಯಕ್ಷ ಶ್ರೀಕೃಷ್ಣ ಎನ್.ಬುಗಟ್ಯಾಗೋಳ ಅಧ್ಯಕ್ಷತೆ ವಹಿಸುವರು ಎಂದರು.

ಸಂಜೆ 7.30ರಿಂದ ಪ್ರತಿಭಾ ಪುರಸ್ಕಾರ, ಇಲಾಖೆ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ 10.30ರವರೆಗೆ ಕಂಬದ ರಂಗಯ್ಯ, ಪೃಥ್ವಿ ಭಟ್, ಅಂಕಿತಾ ಖುಂಡು, ಅಮೀಶ್‌ಕುಮಾರ್ ಹಾಗೂ ಪ್ರಹ್ಲಾದ್ ದೀಕ್ಷಿತ್ ತಂಡದಿಂದ ಕನ್ನಡ ರಾಜ್ಯೋತ್ಸವ ಸಂಗೀತ ರಸಸಂಜೆ ಏರ್ಪಡಿಸಲಾಗಿದೆ ಎಂದರು.

ನ. 28ರಂದು ಬೆಳಗ್ಗೆ 8ರಿಂದ ನಗರದ ಜೆಎನ್‌ಎನ್‌ಸಿಇ ಮೈದಾನ, ಎನ್‌ಇಎಸ್ ಮೈದಾನಗಳಲ್ಲಿ ಇಲಾಖೆ ಕ್ರೀಡಾಕೂಟ ನಡೆಯಲಿದೆ. ಕ್ರಿಕೆಟ್, ಅಥ್ಲೆಟಿಕ್ ಸೇರಿ ವಿವಿಧ ಕ್ರೀಡಾ ಸ್ಪರ್ಧೆಗಳಿದ್ದು, ಒಂದು ಸಾವಿರ ಅಧಿಕಾರಿಗಳು ಮತ್ತು ನೌಕರರು ಪಾಲ್ಗೊಳ್ಳುವರು. ನ. 29ರಂದು ಸಂಜೆ 4.30ಕ್ಕೆ ಕ್ರೀಡೋತ್ಸವದ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಶಾಖೆ ಅಧ್ಯಕ್ಷ ಕೆ.ಎಸ್.ಶ್ರೀಕಾಂತ್, ಲೋಕೇಶ್, ಕಾಂತರಾಜ್, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.