ಶಿರಾಳಕೊಪ್ಪದಲ್ಲಿ ರಣಾ ವೇದಿಕೆಯಿಂದ ಕನ್ನಡ ನಾಮ ಫಲಕ ಕಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರವಿನಾಯ್ಕ, ನವೀನ್, ವಿಜಯ್ ಕುಮಾರ್, ನಾಗರಾಜ್ ಇತರರಿದ್ದರು.
- ಸರ್ಕಾರದ ಸುತ್ತೋಲೆ ಇದ್ದರೂ ಕಡೆಗಣನೆ
- ಶಿರಾಳಕೊಪ್ಪದಲ್ಲಿ ಬಸ್ ನಿಲ್ದಾಣದವರೆಗೆ ಮೆರವಣಿಗೆ
- ಪುರಸಭೆ ಮುಖ್ಯಾಧಿಕಾರಿಗೆ ಕರವೇಯಿಂದ ಮನವಿ ಸಲ್ಲಿಕೆ
- ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಒತ್ತಾಯ
ಶಿರಾಳಕೊಪ್ಪ: ಪಟ್ಟಣದಲ್ಲಿನ ವಾಣಿಜ್ಯ ಮಳಿಗೆಗಳು, ಕೈಗಾರಿಕಾ ಟಕಗಳು, ಕಚೇರಿಗಳು, ಖಾಸಗಿ ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಪಟ್ಟಣದ ಆನವಟ್ಟಿ ರಸ್ತೆಯಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡದ ನೆಲ, ಜಲ, ಭಾಷೆಯ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆದರೂ ನಾವು ಕನ್ನಡ ಬೆಳೆಸಿ, ಉಳಿಸಿ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿ ಮೆಟ್ಟಿನಿಲ್ಲುವ ತಾಕತ್ತು ನಮಗಿದೆ. ಕರ್ನಾಟಕದಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸುವ ಸರ್ಕಾರದ ಸುತ್ತೋಲೆ ಇದ್ದರೂ ಕನ್ನಡದ ನಾಮಫಲಕ ಅಳವಡಿಸಲು ಹಿಂದೇಟು ಹಾಕುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇನ್ನು 5 ದಿನ ಕಾಲಾವಕಾಶ ನೀಡುತ್ತೇವೆ. ಇಲ್ಲವಾದರೆ ಸರ್ಕಾರಿ ಕಚೇರಿಗಳ ಮುಂದೆ ತೀವ್ರ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಸಿದರು.
ಕರವೇ ಶಿಕಾರಿಪುರ ತಾಲೂಕು ಅಧ್ಯ ರವಿನಾಯ್ಕ, ನವೀನ್, ವಿಜಯ್ಕುಮಾರ್, ನಾಗರಾಜ್ ಇತರರಿದ್ದರು.