ಶಿಕಾರಿಪುರದ ಪುಷ್ಪಾ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಎಸಿಎಫ್ ರವೀಂದ್ರ ನಾಯಕ್ ಸಸಿ ನೆಟ್ಟರು. ಜಾಯ್ ಜಾಲ್ಸನ್ ಅಂಡ್ರೇಡ್, ಕೆ.ಎಸ್.ಹುಚ್ರಾಯಪ್ಪ ಇತರರಿದ್ದರು. 
ಶಿವಮೊಗ್ಗ

ಪರಿಸರ ಸಂರಕ್ಷಣೆ ಕಾರ್ಯಕ್ಕೆ ಕೈಜೋಡಿಸಿ

ಸೋಮಶೇಖರ ಎನ್
ಶಿಕಾರಿಪುರ: ಸಾರ್ವಜನಿಕರು ಜನ್ಮದಿನ ಸೇರಿ ವಿಶೇಷ ದಿನಗಳನ್ನು ಸ್ಮರಣೀಯವಾಗಿಸಲು ಒಂದೊಂದು ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಸ್.ರವೀಂದ್ರ ನಾಯಕ್ ಹೇಳಿದರು.
 ನಗರದ ಪುಷ್ಪಾ ವಿದ್ಯಾಸಂಸ್ಥೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಂದರ ಪರಿಸರದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು.
ಸಂಸ್ಥೆ ವ್ಯವಸ್ಥಾಪಕ ಜಾಯ್ ಜಾಲ್ಸನ್ ಅಂಡ್ರೇಡ್ ಮಾತನಾಡಿ, ಎಲ್ಲರೂ ಒಟ್ಟಾಗಿ ಪ್ಲಾಸ್ಟಿಕ್‌ಮುಕ್ತ ಶಾಲೆ ನಿರ್ಮಿಸೋಣ, ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡೋಣ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಮುಖ್ಯಶಿಕ್ಷಕಿ ಸಿಸ್ಟರ್ ಅಡ್ರಿನ್, ಶಿಕ್ಷಕರು, ಸಿಬ್ಬಂದಿ ಇದ್ದರು.