ಭದ್ರಾವತಿ: ರೋಟರಿ ಸಂಸ್ಥೆಯು ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಸಂಸ್ಥೆಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ರೋಟರಿ ಕ್ಲಬ್ ಸದಸ್ಯರ ಸಂಖ್ಯೆ ಹೆಚ್ಚುತ್ತಿದ್ದು, ಸಮಾಜಮುಖಿ ಚಟುವಟಿಕೆಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ರೋಟರಿ ಸಹಾಯಕ ಗವರ್ನರ್ ಕೆ.ಎಚ್.ತೀರ್ಥಯ್ಯ ಮಾತನಾಡಿ, ರೋಟರಿ ಸಂಸ್ಥೆ ಇರುವುದು ವ್ಯಕ್ತಿ ಮತ್ತು ಸಮಾಜದ ಸೇವೆಗಾಗಿ ರೂಪುಗೊಂಡ ಸಂಸ್ಥೆಯಾಗಿದೆ. ಅಸಹಾಯಕ ವ್ಯಕ್ತಿಗೆ ಸಹಾಯಹಸ್ತ ಚಾಚುವ ಮೂಲಕ ಆತನನ್ನು ಸಮಾಜದ ಮುಖ್ಯವಾಹಿನಿಗೆ ಕೊಂಡೊಯ್ಯುವ ಬದ್ಧತೆ ರೋಟರಿ ಸದಸ್ಯರಿಗೆ ಇರುತ್ತದೆ ಎಂದರು.
ಆಶಾ ಕಾರ್ಯಕರ್ತೆ ಪುಷ್ಪಾ ಪರಮೇಶ್, ಸಾರ್ವಜನಿಕ ಆಸ್ಪತ್ರೆ ನರ್ಸಿಂಗ್ ಮೇಲ್ವಿಚಾರಕಿ ಶೀಲಾ ಮೇರಿ, ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿ ಪದವಿ ಪಡೆದ ಎಂ.ಎನ್.ಶಿವಸ್ವಾಮಿ ಹಾಗೂ ವಾದ್ಯವೃಂದದ ವರದರಾಜು ಎಂಬುವರನ್ನು ಗೌರವಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ನಿರಂಜನ್, ವೀಣಾ ಭಟ್. ಕಾರ್ಯದರ್ಶಿ ಇಳಯರಾಜ, ಲಕ್ಷ್ಮೀ, ವನಿತಾ ಇತರರಿದ್ದರು.