ಸಮುದಾಯ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ಮರು ನೇಮಕ ಮಾಡುವಂತೆ ಒತ್ತಾಯಿಸಿ ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಾರದಾ ಪೂರ‌್ಯಾನಾಯ್ಕಾ, ಕೆ.ಬಿ.ಪ್ರಸನ್ನಕುಮಾರ್, ಕೆ.ಎನ್.ರಾಮಕೃಷ್ಣ, ದಾದಾಪೀರ್ ಇತರರಿದ್ದರು. 
ಶಿವಮೊಗ್ಗ

ವೈದ್ಯರ ಮರುನೇಮಕಕ್ಕೆ ಒತ್ತಾಯಿಸಿ ಜೆಡಿಎಸ್ ಪ್ರತಿಭಟನೆ | Jds protest

ಪ್ರಮುಖ ಮುಖ್ಯಾಂಶಗಳು

  • ಟ್ರೈಯಾಡ್ ಯೋಜನೆ ಆದೇಶದ ಅನುಸಾರ ವರ್ಗಾವಣೆ
  • ಜೆಡಿಎಸ್ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರ ಆಗ್ರಹ
  • ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ
ಶಿವಮೊಗ್ಗ: ತಾಲೂಕಿನ ಆಯನೂರು, ಹೊಳಲೂರು ಮತ್ತು ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಜ್ಞ ವೈದ್ಯರನ್ನು ಮರು ವರ್ಗಾವಣೆ(Re-transfer) ಮಾಡುವಂತೆ ಒತ್ತಾಯಿಸಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು(JDS workers) ಶನಿವಾರ ಜಿಲ್ಲಾಧಿಕಾರಿ ಕಚೇರಿ(District Collector's Office) ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಮೂರು ಹೋಬಳಿಗಳಲ್ಲಿ ತಾಲೂಕು ಆಸ್ಪತ್ರೆ(Taluk Hospital) ಇಲ್ಲದ ಕಾರಣ ಸರ್ಕಾರ ಕರ್ತವ್ಯ ನಿರ್ವಹಿಸುತ್ತಿದ್ದ ತಜ್ಞ ವೈದ್ಯಾಧಿಕಾರಿ(Specialist Medical Officer)ಗಳನ್ನು ವರ್ಗಾವಣೆ ಮಾಡಿದೆ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಟ ನಡೆಸುವಂತಾಗಿದೆ ಎಂದು ದೂರಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಹಾಲಿ ಟ್ರೈಯಾಡ್ ಯೋಜನೆ(Triad Project) ಆದೇಶದಂತೆ ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಸರ್ಕಾರ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ತಾಲೂಕು ಕೇಂದ್ರ ಇಲ್ಲದ ಕಾರಣ ವೈದ್ಯರನ್ನು ವರ್ಗಾವಣೆ ಮಾಡಿರುವುದಾಗಿ ತಿಳಿಸಿದೆ. ಕೂಡಲೇ ವರ್ಗಾವಣೆ ಮಾಡಲಾದ ತಜ್ಞ ವೈದ್ಯರನ್ನು (ಸ್ತ್ರೀರೋಗ ತಜ್ಞರು, ಸಾಮಾನ್ಯ ವೈದ್ಯಾಧಿಕಾರಿ (ಜನರಲ್ ಫಿಜಿಶಿಯನ್), ಅರಿವಳಿಕೆ ತಜ್ಞ ಮತ್ತು ಮಕ್ಕಳ ತಜ್ಞರು) ಮೂರು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
 ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ  ಕೆ.ಎನ್.ರಾಮಕೃಷ್ಣ, ಕಾರ್ಯಾಧ್ಯಕ್ಷ ದಾದಾಪೀರ್, ಗ್ರಾಮಾಂತರ ಅಧ್ಯಕ್ಷ ಕಾಂತರಾಜ್, ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಸಂಗಯ್ಯ, ಪ್ರಮುಖರಾದ ಶಿವಮೂರ್ತಿ ನಾಯಕ್, ಡಿ.ಕಾಂತರಾಜ್, ಉಮಾಶಂಕರ್ ಉಪಾಧ್ಯ, ಹೊಳಲೂರು ನಿಂಗಪ್ಪ, ದೀಪಕ್ ಸಿಂಗ್, ಎಸ್.ಎನ್.ಮಹೇಶ್, ನರಸಿಂಹ ಗಂಧದಮನೆ, ಸತೀಶ್, ಪ್ರಕಾಶ್ ಇತರರಿದ್ದರು.