ಶಾಸಕ ಆರಗ ಜ್ಞಾನೇಂದ್ರ 
ಶಿವಮೊಗ್ಗ

ತಂದೆ ಹೆಸರಿಟ್ಟುಕೊಂಡರೆ ಸಾಲದು; ಮಧು ಬಂಗಾರಪ್ಪಗೆ ಆರಗ ತಿರುಗೇಟು | Araga Gnanendra

ಪ್ರಮುಖ ಮುಖ್ಯಾಂಶಗಳು

  • ತಂದೆಯ ಯೋಗ್ಯತೆ, ನಡವಳಿಕೆ ರಾಜಕಾರಣದಲ್ಲಿ ಬರಬೇಕು ಎಂದು ಟಾಂಗ್
  • ಹುಟ್ಟಿನಿಂದಲೇ ಚಿನ್ನದ ಚಮಚ ಇಟ್ಟುಕೊಂಡು ಬಂದವರು ಮಧು ಬಂಗಾರಪ್ಪ
  • ರಾಜಕಾರಣದಲ್ಲಿ ಬಚ್ಚಾ ಎಂದಿದ್ದಕ್ಕೆ ಸಚಿವ ಮಧುಗೆ ಜ್ಞಾನೇಂದ್ರ ಕಿವಿಮಾತು
ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಅವರು ಹೆಸರಿನ ಮುಂದೆ ತಂದೆಯ ಹೆಸರಿಟ್ಟುಕೊಂಡರೆ ಸಾಲದು. ಬದಲಾಗಿ ಅವರ ತಂದೆ ಎಸ್.ಬಂಗಾರಪ್ಪ(S.Bangarappa) ಅವರು ಹೊಂದಿದ್ದ ಸೌಜನ್ಯ ಮತ್ತು ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ(Araga Gyanendra)ತಿರುಗೇಟು ನೀಡಿದರು.
ಮಧು ಬಂಗಾರಪ್ಪ ಅವರ ಹೇಳಿಕೆಗೆ ಬುಧವಾರ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಧು ಬಂಗಾರಪ್ಪ ರಕ್ತ(blood)ದಲ್ಲೇ ರಾಜಕಾರಣವಿದ್ದು, ಹುಟ್ಟಿನಿಂದಲೇ ಚಿನ್ನ(gold)ದ ಚಮಚ ಇಟ್ಟುಕೊಂಡು ಬಂದವರು. ಎಸ್.ಬಂಗಾರಪ್ಪ ನೆರಳಿನಲ್ಲಿ ಬೆಳೆದಿದ್ದಾರೆ. ನನಗಿಂತ ಚೆನ್ನಾಗಿ ಮಾತನಾಡಬೇಕು ಮತ್ತು ರಾಜಕೀಯ(politics)ದಲ್ಲಿ ಒಂದು ಅಂತಸ್ತನ್ನು ಅವರು ಕಾಪಾಡಿಕೊಳ್ಳಬೇಕು. ಅವರ ತಂದೆಯವರ ಯೋಗ್ಯತೆ, ಉತ್ತಮ ನಡವಳಿಕೆ, ಸ್ನೇಹಮಯಿ ಗುಣ ಮತ್ತು ರಾಜಕಾರಣದಲ್ಲಿ ಎದುರಾಳಿಗಳಿಗೆ ನೀಡುತ್ತಿದ್ದ ಗೌರವ ಅವರಿಗೂ ಬರಬೇಕು ಎಂದು ಟಾಂಗ್ ನೀಡಿದರು.
ನಾವೆಲ್ಲ ರಾಜಕೀಯಕ್ಕೆ ಬಚ್ಚಾಗಳಾಗಿಯೇ ಬಂದವರು. ಬಡತನ, ಶೂನ್ಯ(ziro)ದಿಂದ ರಾಜಕೀಯದಲ್ಲಿ ನೆಲೆ ಕಂಡುಕೊಂಡವರು. ನಾನು ಕೂಡ ಈ ಹಿಂದೆ ಎರಡು ಜಿಲ್ಲೆಗಳ ಉಸ್ತುವಾರಿ ಸಚಿವನಾಗಿದ್ದೆ. ನನ್ನ ತಾಲೂಕಿಗೆ ಮಂತ್ರಿಯೊಬ್ಬರು ಬಂದಾಗ ಅವರಿಗೆ ಗೌರವ ನೀಡುವುದು ನನ್ನ ಕರ್ತವ್ಯ. ವೈಯಕ್ತಿಕ ಚಾರಿತ್ರ್ಯ ಹರಣ ಮಾಡುವುದನ್ನು ಬಿಡಬೇಕು. ಕೇವಲ ಟೀಕೆ ಮಾಡುವ ಮೂಲಕವೇ ದೊಡ್ಡವನಾಗಬೇಕು ಎನ್ನುವುದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.