ಹೊಳೆಹೊನ್ನೂರು ಸಮೀಪ ಅರಬಿಳಚಿ ವಡ್ಡರಹಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ ಉದ್ಘಾಟಿಸಿದರು. ರಾಜಪ್ಪ, ಕಾರ್ತಿಕ್, ಶೋಭಾ ಇತರರಿದ್ದರು. 
ಶಿವಮೊಗ್ಗ

ಸರ್ಕಾರಿ ಶಾಲೆ ಉಳಿಸುವುದು ಅವಶ್ಯ

ಹೊಳೆಹೊನ್ನೂರು: ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಸಿಆರ್‌ಪಿ ರಾಜಪ್ಪ ಹೇಳಿದರು.
ಸಮೀಪದ ಅರಬಿಳಚಿ ವಡ್ಡರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ದಾನಿಗಳಿಂದ ಸಮವಸ್ತ್ರ, ಶೂ, ಸಾಕ್ಸ್ ಹಾಗೂ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿ, ಶಾಲೆಗಳ ಪ್ರಗತಿಗೆ ಮಕ್ಕಳ ಪಾಲಕರು ಕೈಜೋಡಿಸಬೇಕು. ಸರ್ಕಾರಿ ಶಾಲೆ ಮಕ್ಕಳಿಗೆ ದಾನಿಗಳ ಸಹಕಾರ ಹಾಗೂ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ಓಂಕಾರಪ್ಪ, ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ, ಶಿಕ್ಷಕ ಕಾರ್ತಿಕ್, ಸಹಶಿಕ್ಷಕಿ ಶೋಭಾ, ಜಿ.ಪ್ರೇಮಕುಮಾರಿ, ಗ್ರಾಮದ ಈಶ್ವರ್, ರೇಣುಕಮ್ಮ, ಮಂಜುನಾಥ್, ಆಕಾಶ್, ನಾಗೇಂದ್ರಪ್ಪ, ಕುಮಾರ್ ಇತರರಿದ್ದರು.