ಶಿವಮೊಗ್ಗದಲ್ಲಿ ಕಾನೂನು ಸಾರತಾ ಕ್ಲಬ್ಗಳನ್ನು ನ್ಯಾಯಾಧೀಶ ಅಭಯ ಧನಪಾಲ ಚೌಗಲಾ ಉದ್ಘಾಟಿಸಿದರು. ಎಂ.ಎಸ್.ಸಂತೋಷ್, ಪ್ರಭುಲಿಂಗ ಕವಳಿಕಟ್ಟಿ, ಎನ್.ಹೇಮಂತ್, ಎಸ್.ಆರ್.ಮಂಜುನಾಥ ಇತರರಿದ್ದರು.
ಶಿವಮೊಗ್ಗ : ಕಾನೂನಿನ ಅರಿವು ಪಡೆದ ಮಕ್ಕಳು ಭವಿಷ್ಯದಲ್ಲಿ ಸುತ್ತಮುತ್ತ ನಡೆಯುವ ಬಾಲ್ಯವಿವಾಹ, ಪೋಕ್ಸೋ ಸೇರಿ ಹಲವಾರು ಅಪರಾಧಗಳನ್ನು ತಡೆಯಬಲ್ಲರು ಎಂದು ಪ್ರಭಾರ ಜಿಲ್ಲಾ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯ ಅಭಯ ಧನಪಾಲ ಚೌಗಲಾ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂದಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ಕೈಗೊಳ್ಳುವ ಬಾಲ್ಯವಿವಾಹಮುಕ್ತ ಭಾರತ ಅಭಿಯಾನ ಹಾಗೂ ರಸ್ತೆ ಸುರಾ ಮಾಸಾಚರಣೆ ಅಂಗವಾಗಿ ಕಾನೂನು ಸಾರತಾ ಕ್ಲಬ್ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಜನಸಂಖ್ಯೆ ವಾಸಿಸುತ್ತಿರುವ ಕಾರಣ ಕಾನೂನು ಅರಿವು ಕಡಿಮೆ ಇದೆ. ಹಾಗಾಗಿ ಕಾನೂನುಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ 1987ರಲ್ಲಿ ಕಾನೂನು ಸೇವಾ ಅಧಿನಿಯಮ ಜಾರಿಗೆ ತರಲಾಗಿತ್ತು. ಕಾನೂನಿನ ಅರಿವು ಹಾಗೂ ನೆರವು ನೀಡುವುದು ಅಧಿನಿಯಮದ ಮುಖ್ಯ ಉದ್ದೇಶ ಎಂದರು.
ಚಂಡೀಗಢದಲ್ಲಿ ಮೊಟ್ಟ ಮೊದಲಿಗೆ 2010ರಲ್ಲಿ ಕಾನೂನು ಸಾರತಾ ಕ್ಲಬ್ ಆರಂಭಿಸಲಾಗಿತ್ತು. ಆನಂತರ ದೇಶಾದ್ಯಂತ ಆರಂಭಿಸಲಾಗಿದ್ದು, ಯಶಸ್ವಿಯಾಯಿತು. ಇಂದು ಜಿಲ್ಲೆಯಲ್ಲಿ 1234 ಸಾರತಾ ಕ್ಲಬ್ಗಳ ಮೂಲಕ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸುವ ಕೆಲಸ ಆಗಬೇಕು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ಜಿಲ್ಲೆಯಲ್ಲಿ ಜನನ ಪ್ರಮಾಣಪತ್ರ ಇಲ್ಲದೆ ಶಾಲೆಗೆ ದಾಖಲಾಗದಿರುವ 5 ಸಾವಿರ ಮಕ್ಕಳನ್ನು ಗುರುತಿಸಿದ್ದು, ಈ ಪೈಕಿ 500 ಮಕ್ಕಳಿಗೆ ಜಿಪಂ, ಶಿಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಜನನ ಪ್ರಮಾಣಪತ್ರ ಒದಗಿಸಲಾಗಿದೆ ಎಂದರು.
ವಿವಿಧ ಶಾಲೆಗಳಲ್ಲಿ ಆಯೋಜಿಸಿದ್ದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಡಿಡಿಪಿಐ ಎಸ್.ಆರ್.ಮಂಜುನಾಥ, ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೆಶಪ್ಪ, ಡಿಸಿಪಿಒ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶಶಿರೇಖಾ, ಬಿಇಒ ರಮೇಶ್, ಜೆಸಿಐನ ಸ್ವಾತಿ ಇತರರಿದ್ದರು.
ಕಾನೂನಿನ ಅರಿವಿನಿಂದ ಬೌದ್ಧಿಕ ಸಿರಿತನ
ಕಾನೂನಿನ ಅರಿವು ನಮ್ಮಲ್ಲಿ ಬೌದ್ಧಿಕ ಸಿರಿತನ ಹೆಚ್ಚಿಸುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ವಿದ್ಯಾರ್ಥಿಗಳು ಸೇರಿ ನಾವೆಲ್ಲರೂ ಸಂವಿಧಾನಾತ್ಮಕ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಸಂವಿಧಾನ ಪೀಠಿಕೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೆ ಗೊಂದಲಗಳು ಪರಿಹಾರವಾಗಿ ಸಾಮರಸ್ಯದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.
ಶೇ.50ರಷ್ಟು ಬಾಲ್ಯವಿವಾಹಕ್ಕೆ ತಡೆ
ಮಿಷನ್ ಸುರಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಬಾಲ್ಯವಿವಾಹ, ಪೋಕ್ಸೋ ಹಾಗೂ ಇತರೆ ಅಪರಾಧಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಪ್ರಸಕ್ತ ವರ್ಷ ಶೇ.50ರಷ್ಟು ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು. ಶಿವಮೊಗ್ಗದಲ್ಲಿ ಮಕ್ಕಳು ಸಹಾಯವಾಣಿ 1098 ಬಳಕೆ ಮಾಡಿ ಬಾಲ್ಯವಿವಾಹ ತಡೆಗಟ್ಟಿದ್ದಾರೆ ಎಂದರು.
ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದಲ್ಲಿ ಅವರು ಭವಿಷ್ಯದ ಉತ್ತಮ ನಾಗರಿಕರಾಗಿ ಹೊರ ಹೊಮ್ಮುವರು. ಈ ನೆಲದ ಕಾನೂನುಗಳು, ರಸ್ತೆ ಸುರತೆ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕ.
> ಜಿ.ಆರ್.ರಾವೇಂದ್ರಸ್ವಾಮಿ, ವಕೀಲರ ಸಂದ ಜಿಲ್ಲಾಧ್ಯ