ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್. 
ಶಿವಮೊಗ್ಗ

ಹೈಕಮಾಂಡ್ ಹೇಳಿದಷ್ಟು ದಿನ ಸಚಿವನಾಗಿ ಇರ್ತಿನಿ | Urban Development Minister

ಪ್ರಮುಖ ಮುಖ್ಯಾಂಶಗಳು

  • ಎಷ್ಟು ದಿನ ಅಧಿಕಾರದಲ್ಲಿರಲು ಹೇಳುತ್ತಾರೋ ಅಲ್ಲಿಯವರೆಗೂ ಇರುತ್ತೇವೆ
  • ಯಾವಾಗ ಸಚಿವರಾಗಿರುವುದು ಬೇಡ ಎಂದು ಹೇಳುತ್ತದೋ ಆಗ ಶಾಸಕರಾಗಿರುತ್ತೇವೆ
  • ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿಕೆ
ಶಿವಮೊಗ್ಗ: ಹೈಕಮಾಂಡ್‌ನವರು ಎಷ್ಟು ದಿನ ಅಧಿಕಾರದಲ್ಲಿರಲು ಹೇಳುತ್ತಾರೋ ಅಲ್ಲಿಯವರೆಗೂ ನಾವು ಇರುತ್ತೇವೆ. ಯಾವಾಗ ಹೈಕಮಾಂಡ್ ಸಚಿವರಾಗಿರುವುದು ಬೇಡ ಎಂದು ಹೇಳುತ್ತದೋ ಆಗ ಶಾಸಕರಾಗಿ ಉಳಿಯುತ್ತೇವೆ ಎಂದು ನಗರಾಭಿವೃದ್ಧಿ(Urban Development)ಸಚಿವ ಬೈರತಿ ಸುರೇಶ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ವಿಚಾರದಲ್ಲಿ ಹೈಕಮಾಂಡ್(High Command) ತೀರ್ಮಾನವೇ ಅಂತಿಮವಾಗಿದೆ. ಸಿಎಂ, ಡಿಸಿಎಂ, ಸಚಿವರು, ಶಾಸಕರು, ಎಲ್ಲರೂ ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ಬದ್ಧರಾಗಿರುತ್ತೇವೆ ಎಂದರು.
ಶಾಸಕರು ದೆಹಲಿಗೆ ಹೋದರೆ ತಪ್ಪೇನಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳು ಬದಲಾದರು. ನಮ್ಮ ಸರ್ಕಾರದಲ್ಲೂ ಸಚಿವ ಸಂಪುಟ(Cabinet) ಪುನರ್ ರಚನೆಯಾಗಬಾರದು ಅಂತೇನಿಲ್ಲ. ಎಲ್ಲರಿಗೂ ಅವಕಾಶ ಸಿಗಬೇಕಿದೆ ಎಂದು ಹೇಳಿದರು.
ವಿದ್ಯುತ್ ದರ(Electricity bill) ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಕೇಂದ್ರದ ಇಂಧನ ಬೆಲೆ ಏರಿಕೆಯೇ ಕಾರಣ. ವಾಣಿಜ್ಯ ಸಿಲಿಡಂರ್ ದರ 993 ರೂ. ಏರಿಕೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಆಗುವವರೆಗೂ ಬಿಜೆಪಿಯವರು ಗ್ಯಾಸ್ ದರ ಏರಿಕೆಗೆ ಕಾಯುತ್ತಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಗ್ಯಾಸ್ ದರವನ್ನು ಏರಿಕೆ ಮಾಡಲಾಗಿದೆ. ಇದನ್ನು ಯಾರೋಬ್ಬರೂ ಕೇಳುವವರಿಲ್ಲ. ಗ್ಯಾಸ್ ದರ ಏರಿಸಿದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಎರಡು ರೂ. ದರ ಹೆಚ್ಚಿಸಿದಾಗ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದವರು ಈಗ ಸುಮ್ಮನಿದ್ದಾರೆ. ರಾಜ್ಯ ಸರ್ಕಾರ ಒಂದು ಮನೆಗೆ 5 ಗ್ಯಾರಂಟಿ(Guarantee) ರೂಪದಲ್ಲಿ ತಲಾ 8 ಸಾವಿರ ರೂ. ನೀಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜನರ ಕಷ್ಟ ದೇವರಿಗೆ ಪ್ರೀತಿಯಾಗಿದೆ. ವಿದ್ಯುತ್ ತಯಾರಿಕೆಗೆ ಇಂಧನ ಬೇಕಿದೆ. ಗ್ಯಾಸ್, ಪೆಟ್ರೋಲ್, ಡಿಸೇಲ್ ಎಲ್ಲ ದರ ಏರಿಕೆ ಮಾಡಿದರೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಹಾಗಾಗಿ ವಿದ್ಯತ್ ದರ ಏರಿಕೆಯಾಗಿದೆ ಎಂದು ಸಮರ್ಥಿಸಿಕೊಂಡರು.