ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ ಜಲಾಶಯಕ್ಕೆ ಬಿ.ವೈ.ರಾಘವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಬಾಗಿನ ಅರ್ಪಿಸಿದರು. ಕೆ.ಎಸ್.ಗುರುಮೂರ್ತಿ, ಗಾಯತ್ರಿ ಮಲ್ಲಪ್ಪ, ಪ್ರೇಮಾ ವಿಜಯೇಂದ್ರ ಇತರರಿದ್ದರು. 
ಶಿವಮೊಗ್ಗ

ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲ

ಸೋಮಶೇಖರ ಎನ್
ಶಿಕಾರಿಪುರ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಪರಿಣಾಮ ತಾಲೂಕಿನ ಕೆರೆಕಟ್ಟೆಗಳು ತುಂಬುತ್ತಿವೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಅಂಬ್ಲಿಗೊಳ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿ, ರೈತರಿಗೆ ಅನುಕೂಲ ಒದಗಿಸಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನೀರಾವರಿ ಯೋಜನೆಗೆ ಹೆಚ್ಚಿನ ಪ್ರಾಮುಖ್ಯ ನೀಡಿದ್ದರು. ಈ ವರ್ಷ ಆರಂಭದಲ್ಲಿ ಸರಿಯಾಗಿ ಮಳೆ ಆಗಿರಲಿಲ್ಲ. ಈಗ ಹೆಚ್ಚಿನ ಮಳೆ ಬಂದಿರುವುದು ಸಂತಸ ತಂದಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಆಗಬೇಕಿರುವ ಕಾಮಗಾರಿಗಳಿಗೆ ಸರ್ಕಾರ ಅನುದಾನ ನೀಡಬೇಕು ಎಂದರು.
ಭಾರತದ ಅಕ್ಕಪಕ್ಕದ ದೇಶಗಳಿಂದ ಅಡಿಕೆ ಕಳವು ಮಾರ್ಗದಲ್ಲಿ ಬರುತ್ತಿದೆ. ಅಡಿಕೆ ಆಮದು ಹೆಚ್ಚಾದಷ್ಟು ಸ್ಥಳೀಯವಾಗಿ ಅಡಿಕೆ ಬೆಲೆ ಕುಸಿಯುತ್ತದೆ. ಕಳ್ಳಮಾರ್ಗದಲ್ಲಿ ಭಾರತಕ್ಕೆ ಅಡಿಕೆ ಬರದಂತೆ ತಡೆಗಟ್ಟುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪ್ರೇಮಾ ವಿಜಯೇಂದ್ರ, ಮಂಡಲ ಅಧ್ಯಕ್ಷ ಹನುಮಂತಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ಲಿಂಗಪ್ಪ, ಗುರುರಾಜ್ ಜಕ್ಕಿನಕೊಪ್ಪ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಹುಲ್ಮಾರ್ ಮಹೇಶ್, ಡಿ.ಎಲ್.ಬಸವರಾಜ್, ಚನ್ನವೀರಪ್ಪ, ಎಂ.ಬಿ.ಶಿವಕುಮಾರ್, ವೀರನಗೌಡ, ಪ್ರವೀಣ್, ಜೀನಳ್ಳಿ ಪ್ರಶಾಂತ್, ಗಾಯತ್ರಿ ಮಲ್ಲಪ್ಪ ಇತರರಿದ್ದರು.