ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ  
ಶಿವಮೊಗ್ಗ

ಶಿವಮೊಗ್ಗಕ್ಕೆ ಬರುವಂತೆ ಪಂಚಪೀಠ ಶ್ರೀಗಳಿಗೆ ಆಹ್ವಾನ । Panchacharya Cooperative Society

ಶಿವಮೊಗ್ಗ: ಪಂಚ ಪೀಠ(Pancha perth)ಗಳು ಒಂದೊಂದು ದಿಕ್ಕಿನಲ್ಲಿ ಮುಖ ಮಾಡಿದ್ದವು. ಇಂದು ಐದೂ ಪಂಚಾಚಾರ್ಯರು(Panchacharya) ಒಂದೇ ದಿಕ್ಕಿನಲ್ಲಿ ಇದ್ದಾರೆ ಎಂಬುದೇ ಸಂತೋಷ. ಹಾಗಾಗಿ ಪಂಠಪೀಠಗಳ ಶ್ರೀಗಳು ಒಟ್ಟಾಗಿ ಶಿವಮೊಗ್ಗಕ್ಕೆ ಬರಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಹ್ವಾನ ನೀಡಿದರು.
ನಗರದ ಜೆ.ಎಚ್.ಪಟೇಲ್ ಬಡಾವಣೆಯ ಶ್ರೀ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ( Silver Jubilee)ದಲ್ಲಿ ಮಾತನಾಡಿದ ಅವರು, ಐದು ಪೀಠಗಳ ಶ್ರೀಗಳು ಒಂದಾಗಬೇಕು ಎಂಬುದು ಕರ್ನಾಟಕದ ಎಲ್ಲರ ಅಪೇಕ್ಷೆ ಆಗಿತ್ತು  ಎಂದರು.
ಯಾವಾಗ ಒಂದಾಗುತ್ತಾರೆಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಐದು ಶ್ರೀಗಳು ಒಂದಾಗಿ ಮುನ್ನೆಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಒಟ್ಟಾಗಿ ಬರುತ್ತೇವೆ ಎಂಬ ಮಾತು ಕೊಟ್ಟು ಹೋಗುವಂತೆ ಉಜ್ಜಯಿನಿ ಶ್ರೀ(Ujjain Sree)ಗಳಲ್ಲಿ ಮನವಿ ಮಾಡಿದ ಅವರು, ಸಹಕಾರಿ ತತ್ವ ವಿಘಟನೆಯಲ್ಲ, ಸಂಘಟನೆ ಆಗಿದೆ. ಪಂಚಪೀಠಗಳಂತೆ ಒಟ್ಟಾಗುವುದೇ ಸಾಗುವುದೇ ಸಹಕಾರಿ ತತ್ವವಾಗಿದೆ ಎಂದರು.