ಕುವೆಂಪು ವಿವಿಯಲ್ಲಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್.ಮಂಜುನಾಥ್, ಹಣಕಾಸು ಅಧಿಕಾರಿ ಪ್ರೊ. ರಮೇಶ್, ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಜಗನ್ನಾಥ್ ಡಾಂಗೆ, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸಂವಿಧಾನ ಪೀಠಿಕೆ ಪಠಿಸಿದರು. 
ಶಿವಮೊಗ್ಗ

ಜಗತ್ತಿನಲ್ಲೆ ಶ್ರೇಷ್ಠ ಸಂವಿಧಾನ ಭಾರತದ್ದು |Constitution Day

ಶಿವಮೊಗ್ಗ: ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ(Constitution)ಭಾರತದ್ದು. ಬಹು ವೈವಿಧ್ಯಮಯವಾದ ಭಾರತ(India)ದಲ್ಲಿ ಎಲ್ಲರೂ ಒಗ್ಗೂಡಿ ಬಾಳಲು ಮತ್ತು ಸಾರ್ಥಕವಾಗಿ ಸಾಧನೆ ಮಾಡಲು ಸಂವಿಧಾನ ಮಾರ್ಗದರ್ಶನ ಮಾಡುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯ(kuvempu university)ದ ಆಡಳಿತ ಭವನದಲ್ಲಿ ಬುಧವಾರ 76ನೇ ಭಾರತದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದು ಪ್ರಸ್ತಾವನೆ ಬೋಧಿಸುವದಷ್ಟೇ ಮಾತ್ರವಲ್ಲ, ಅದರಂತೆ ಅನುಸರಿಸಬೇಕು. ಆಗ ಭಾರತ ದೇಶ ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಭಾರತದ ಸಂವಿಧಾನ ಜಗತ್ತಿನ ವಿವಿಧ ದೇಶಗಳ ಸಂವಿಧಾನಗಳ ಅತ್ಯುತ್ತಮ ಅಂಶಗಳನ್ನು ಒಳಗೊಂಡ ಅತ್ಯುತ್ತಮವಾದ ಶಾಸನಾತ್ಮಕ ದಾರಿದೀಪ. ಇದರ ಶ್ರೇಯ ಡಾ. ಬಿ.ಆರ್.ಅಂಬೇಡ್ಕರ್(B.R.ambedkar) ಮತ್ತು ಸಂವಿಧಾನ ರಚನಾ ಮಂಡಳಿಯ ಎಲ್ಲ ಸದಸ್ಯರಿಗೆ ಸಲ್ಲಬೇಕು ಎಂದರು.
ಕುಲಸಚಿವ ಎ.ಎಲ್.ಮಂಜುನಾಥ್, ಹಣಕಾಸು ಅಧಿಕಾರಿ ಪ್ರೊ. ರಮೇಶ್, ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಜಗನ್ನಾಥ್ ಡಾಂಗೆ, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಲ್ಲೂ ಏಕಕಾಲಕ್ಕೆ ಮುಖ್ಯಸ್ಥರು ಪ್ರಸ್ತಾವನೆ ಬೋಧಿಸಿದರು.