ಭದ್ರಾವತಿ ಚಾಮೇಗೌಡ ಏರಿಯಾದಲ್ಲಿ ಡಾ. ರಾಜ್ಕುಮಾರ್ ಮತ್ತು ಡಾ. ಪುನೀತ್ ರಾಜ್ಕುಮಾರ್ ಅವರ ದೇಗುಲ, ಕಂಚಿನ ಪ್ರತಿಮೆ ಅನಾವರಣವನ್ನು ಅಶ್ವಿನಿ ಪುನೀತ್ರಾಜ್ಕುಮಾರ್ ನೆರವೇರಿಸಿದರು. ಬಿ.ಕೆ.ಸಂಗಮೇಶ್ವರ್, ಎಸ್.ಕುಮಾರ್ ಮುಂತಾದವರಿದ್ದರು.
ಭದ್ರಾವತಿ: ಅಭಿಮಾನಿಗಳ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನೆಂದೂ ಚಿರಋಣಿ. ನಿಮಗೆಲ್ಲರಿಗೂ ಧನ್ಯವಾದಗಳು ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದರು.
ನಗರದ ಬಿ.ಎಚ್.ರಸ್ತೆ ಚಾಮೇಗೌಡ ಏರಿಯಾದಲ್ಲಿ ಡಾ. ರಾಜ್ಕುಮಾರ್ ಮತ್ತು ಡಾ. ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂ ನೂತನವಾಗಿ ನಿರ್ಮಿಸಿರುವ ಡಾ. ರಾಜ್ಕುಮಾರ್ ಮತ್ತು ಡಾ. ಪುನೀತ್ ರಾಜ್ಕುಮಾರ್ ಅವರ ದೇಗುಲ, ಕಂಚಿನ ಪ್ರತಿಮೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಜೀವನದಲ್ಲಿ ಕೆಲವರು ಇದ್ದೂ ಸತ್ತಂತೆ ಇರುತ್ತಾರೆ. ಆದರೆ ನಿಧನರಾದರೂ ಬದುಕಿದವರ ಸಾಲಿನಲ್ಲಿ ಪುನೀತ್ ರಾಜ್ಕುಮಾರ್ ಇದ್ದಾರೆ. ಈ ದೇಗುಲದಲ್ಲಿ ನಿತ್ಯವೂ ಪೂಜೆ ಅಭಿಷೇಕಗಳು ನಿರಂತರವಾಗಿ ನಡೆಯಲಿವೆ ಎಂದರು.
ಕಾರ್ಯಕ್ರಮದ ಉಸ್ತುವಾರಿ ಎಸ್.ಕುಮಾರ್ ಮಾತನಾಡಿ, ಪುನೀತ್ ರಾಜ್ಕುಮಾರ್ ಹಾಗೂ ಡಾ. ರಾಜ್ಕುಮಾರ್ ಅವರು ಕೇವಲ ನಟರಾಗಿದ್ದವರಲ್ಲ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದವರು ಎಂದು ಬಣ್ಣಿಸಿದರು.
ವೇದಿಕೆಯಲ್ಲಿ ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಪೌರಾಯುಕ್ತ ಕೆ.ಎನ್.ಹೇಮಂತ್, ಗ್ರಾಮಾಂತರ ಕಾಂಗ್ರೆಸ್ ಅಧ್ಯ ಎಚ್.ಎಲ್.ಷಡಾರಿ, ಪಂಚ ಗ್ಯಾರಂಟಿ ಯೋಜನೆ ಅಧ್ಯ ಬಿ.ಎಸ್.ಗಣೇಶ್, ಪಿಎಲ್ಡಿ ಬ್ಯಾಂಕ್ ಅಧ್ಯ ಬಿ.ಕೆ.ಶಿವಕುಮಾರ್, ನಗರಸಭಾ ಸದಸ್ಯ ಜಾರ್ಜ್ ಮುಂತಾದವರಿದ್ದರು.
ನಗರದ ಪ್ರಮುಖ ರಸ್ತೆಯಲ್ಲಿ ಬೈಕ್ ರ್ಯಾಲಿ ನಡಡಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ನಡೆಸಲಾಯಿತು.
ಡಾ.ಪುನೀತ್ ರಸ್ತೆ ಉದ್ಘಾಟನೆ
ಭದ್ರಾವತಿ ತಾಲೂಕು ಕಚೇರಿ ರಸ್ತೆಯಲ್ಲಿ ಅಳವಡಿಸಲಾಗಿದ್ದ ಡಾ. ಪುನೀತ್ ರಾಜ್ಕುಮಾರ್ ರಸ್ತೆ ನಾಮಲಕವನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಉದ್ಘಾಟಿಸಿದರು. ಸಮೀಪದ ಆಟೋ ನಿಲ್ದಾಣದಲ್ಲಿ ನಿರ್ಮಿಸಿದ್ದ ಪುನೀತ್ ರಾಜ್ಕುಮಾರ್ ಅವರ ನೂತನ ಪುತ್ಥಳಿ ಅನಾವರಣಗೊಳಿಸುವ ಜತೆಗೆ ತಾಪಂ ಕಚೇರಿ ಆವರಣದಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡವರಿಗೆ ಹಕ್ಕುಪತ್ರ ವಿತರಿಸಿದರು.
ಪುನೀತ್ರಾಜ್ಕುಮಾರ್ ಅವರ ನಿಧನ ನಂತರ ಪುನೀತ್ ಆಶಯಗಳಿಗೆ ಅನುಗುಣವಾಗಿ ಅವರ ಧರ್ಮಪತ್ನಿ ಅಶ್ವಿನಿ ನಡೆದುಕೊಳ್ಳುತ್ತಿದ್ದಾರೆ. ಒಂದೇ ಜಾಗದಲ್ಲಿ ತಂದೆ&ಮಗನ ಪುತ್ಥಳಿ ನಿರ್ಮಿಸಿರುವುದು ಭದ್ರಾವತಿ ಬಿಟ್ಟರೆ ರಾಜ್ಯದ ಯಾವ ಊರಿನಲ್ಲಿಯೂ ಕಾಣಲು ಸಾಧ್ಯವಿಲ್ಲ.
> ಬಿ.ಕೆ.ಮೋಹನ್, ನಗರಸಭಾ ಸದಸ್ಯ