ಸೊರಬದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ವೈದ್ಯ ವಿಶ್ವನಾಥ ನಾಡಿಗೇರ್ ಮಾತನಾಡಿದರು. ನಟರಾಜ್, ಗೌರಿ, ಸುಧಾ, ರಾರ್ಬಟ್ ಡಿಮೆಲ್ಲೊ ಇತರರಿದ್ದರು.
- ವ್ಯಸನಮುಕ್ತರಾದರೆ ಕುಟುಂಬದಲ್ಲಿ ಸಿಗುವುದು ಗೌರವ
- ವೈದ್ಯ ವಿಶ್ವನಾಥ ನಾಡಿಗೇರ್ ಆಶಯ
- ಮದ್ಯವರ್ಜನ ಶಿಬಿರದ ಸಮಾರೋಪ
ಸೊರಬ: ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಿವಿಧ ಯೋಜನೆಗಳು ಬಡವರ ಪಾಲಿಗೆ ಅಮೃತವಿದ್ದಂತೆ. ಅನೇಕರ ಬಾಳಿಗೆ ಬೆಳಕಾಗಿವೆ ಎಂದು ವೈದ್ಯ ವಿಶ್ವನಾಥ ನಾಡಿಗೇರ್ ಹೇಳಿದರು.
ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ವ್ಯವಸ್ಥಾಪನ ಶಿಬಿರ, ಜನಜಾಗೃತಿ ವೇದಿಕೆ ಹಾಗೂ ವಿವಿಧ ವೇದಿಕೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವ್ಯಕ್ತಿ ನಡೆದುಬಂದ ದಾರಿ ಸರಿಯಾಗಿದ್ದರೆ, ಅಂಥವರಿಗೆ ಸಮಾಜದಲ್ಲಿ ಗೌರವ, ಮನ್ನಣೆ ಸಿಗುವುದರ ಜತೆಗೆ ಅವರನ್ನು ಅನುಕರಣೆ ಮಾಡುವವರು ಸಹ ಹೆಚ್ಚಾಗುತ್ತಾರೆ ಎಂದರು.
ಮನೆಯಲ್ಲಿ ಒಬ್ಬ ಮದ್ಯವ್ಯಸನಿ ಇದ್ದರೆ ಆ ಕುಟುಂಬ ಕಣ್ಣೀರಿನಿಂದ ಕೈತೊಳೆಯುತ್ತದೆ. ಆ ವ್ಯಕ್ತಿ ಕುಟುಂಬ ಮತ್ತು ಸಮಾಜದ ನಡುವೆ ಸಿಲುಕಿ ಜೀವನ ಸಾಗಿಸಲಾಗದೆ ಪರದಾಡುವಂತಾಗುತ್ತದೆ. ಹಾಗಾಗಿ ಧರ್ಮಸ್ಥಳ ಯೋಜನೆಯು ವ್ಯಸನಿಗಳ ಬಗ್ಗೆ ವಿಶೇಷ ಕಾಳಜಿವಹಿಸಿ ನವಜೀವನ ಎಂಬ ಯೋಜನೆ ಅನುಷ್ಠಾನಕ್ಕೆ ತಂದು ಮದ್ಯವರ್ಜನ ಶಿಬಿರಗಳ ಮೂಲಕ ಅವರ ಬಾಳಿಗೆ ಬೆಳಕಾಗಿದೆ ಎಂದು ತಿಳಿಸಿದರು.
ಶಿಬಿರದ ರಾಜ್ಯ ಸಂಟನಾ ಅಧ್ಯಕ್ಷ ನಟರಾಜ್, ಅಧ್ಯೆ ಗೌರಿ, ಉಪಾಧ್ಯೆ ಸುಧಾ, ಸಂತ ಸೆಬಾಸ್ಟಿಯನ್ ಚರ್ಚ್ ಧರ್ಮ ಕೇಂದ್ರದ ಫಾದರ್ ರಾರ್ಬಟ್ ಡಿಮೆಲ್ಲೊ, ಜಿಲ್ಲಾ ಜನಜಾಗೃತಿ ವೇದಿಕೆಯ ಕಾಳಿರಾಜ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯ ಜಯಶೀಲ ಗೌಡ, ಡಾ. ಜ್ಞಾನೇಶ್, ಸೊರಬ ಮದ್ಯವರ್ಜನ ಶಿಬಿರದ ಅಧ್ಯ ರಾಜು ಹಿರಿಯಾವಲಿ, ಯೋಜನಾಧಿಕಾರಿ ಜಯಂತಿ, ಜಿ.ಕೆರೆಯಪ್ಪ, ಕಸ್ತೂರಿ, ರಮೇಶ್, ಸವಿತಾ, ಸಂಧ್ಯಾ ಇತರರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕಳೆದ ಏಳು ವರ್ಷಗಳಿಂದ ರಾಜ್ಯದಲ್ಲಿ ಮದ್ಯವರ್ಜನ ಶಿಬಿರ ನಡೆಸುತ್ತಿದೆ. ಸೊರಬದ ಈ ಶಿಬಿರ 2065ನೇ ಕಾರ್ಯಕ್ರಮ. ಇಲ್ಲಿಯ 53 ಮಂದಿ ವ್ಯಸನಮುಕ್ತರಾಗಿದ್ದಾರೆ. ಇದರಿಂದ ಇಡೀ ಕುಟುಂಬಕ್ಕೆ ಬೆಳಕಾಗಿದೆ.
> ವಿಶ್ವನಾಥ ನಾಡಿಗೇರ್, ವೈದ್ಯ