ಸಾಗರದ ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಸನ್ನ ಹೆಗ್ಗೋಡು, ಮಹಾಲಕ್ಷ್ಮೀ, ನಾಗರತ್ನಾ, ರಮೇಶ್ ಇತರರಿದ್ದರು.
- ಹೊನ್ನೇಸರದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ
ಸಾಗರ: ಕೈಮಗ್ಗವು ಕೇವಲ ಬಟ್ಟೆ ಉತ್ಪಾದನೆ ಕ್ಷೇತ್ರವಲ್ಲ. ಗ್ರಾಮೀಣ ಆರ್ಥಿಕತೆ, ಕೃಷಿ ಮತ್ತು ಕುಶಲಕಲೆ ಸಂಕೇತವಾಗಿದೆ. ಕೈಮಗ್ಗ ಕ್ಷೇತ್ರವನ್ನು ಬಲಪಡಿಸದಿದ್ದರೆ ಗ್ರಾಮಗಳು ಉಳಿಯುವುದಿಲ್ಲ ಎಂದು ಚರಕ ಸಂಸ್ಥಾಪಕ ಪ್ರಸನ್ನ ಹೆಗ್ಗೋಡು ಹೇಳಿದರು.
ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಮಾತನಾಡಿ, ಸ್ವಾತಂತ್ರಾೃಂತರ ಸರ್ಕಾರಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಮಾಜವು ಖಾದಿ ಹಾಗೂ ಗ್ರಾಮೋದ್ಯೋಗವನ್ನು ನಿರ್ಲಕ್ಷೃ ಮಾಡಿವೆ. ಇದರಿಂದ ಕೈಮಗ್ಗ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೈಮಗ್ಗ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಪರಿಣಾಮಕಾರಿ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ತಿಳಿಸಿದರು.
ಅನೇಕ ಏರಿಳಿತಗಳ ನಡುವೆಯೂ ಕೈಮಗ್ಗ ಕ್ಷೇತ್ರ ಜೀವಂತವಾಗಿದೆ. ಈ ಕ್ಷೇತ್ರ ಲಾಭದಾಯಕ ಉದ್ಯಮವಾಗಬಲ್ಲದು ಎಂಬುದನ್ನು ಕೆಲ ಪ್ರಯತ್ನಗಳು ಸಾಬೀತುಪಡಿಸಿವೆ. ದೇಶಾದ್ಯಂತ ಕೈಮಗ್ಗ ವಿಸ್ತರಿಸುವ ಅಗತ್ಯವಿದೆ. ಗ್ರಾಮೀಣ ಉತ್ಪನ್ನಗಳ ಮೌಲ್ಯವನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಕೈಮಗ್ಗ ಕ್ಷೇತ್ರದ ಮೇಲಿದೆ. ಗ್ರಾಮೀಣ ಜನರು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ದೊಡ್ಡ ಉದ್ಯಮಿಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶವನ್ನು ದೇಶಾದ್ಯಂತ ತಲುಪಿಸಲು ಹೊಸ ಚಳವಳಿ ರೂಪಿಸಬೇಕು ಎಂದರು.
ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮೀ, ಉಪಾಧ್ಯಕ್ಷೆ ನಾಗರತ್ನಾ, ಕಾರ್ಯದರ್ಶಿ ರಮೇಶ್ ಇತರರಿದ್ದರು.