ಶಿವಮೊಗ್ಗದಲ್ಲಿ ಕೆಎಸ್‌ಸಿಎ ನಿರ್ದೇಶಕ, ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿದರು. ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ಎನ್.ರಾಜೇಂದ್ರ ಕಾಮತ್, ವಲಯ ಸಂಚಾಲಕ ಎಚ್.ಎಸ್.ಸದಾನಂದ, ಐಡಿಯಲ್ ಗೋಪಿ ಸುದ್ದಿಗೋಷ್ಠಿಯಲ್ಲಿದ್ದರು. 
ಶಿವಮೊಗ್ಗ

ಬೆಂಗಳೂರಿಗೆ ಐಪಿಎಲ್ ಪಂದ್ಯಗಳು ಕೈತಪ್ಪಿದರೆ ರಾಜ್ಯ ಸರ್ಕಾರವೇ ಹೊಣೆ । IPL matches

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಆತುರದ ನಿರ್ಧಾರಕ್ಕೆ ಆರ್‌ಸಿಬಿ ವಿಜಯೋತ್ಸವ ವೇಳೆ 11 ಮಂದಿ ಬಲಿ
  • ಏಳು ತಿಂಗಳಾದರೂ ನಿವೃತ್ತ ನ್ಯಾಯಮೂರ್ತಿ ಜಾನ್ ಕುನ್ಹಾ ವರದಿ ಬಹಿರಂಗವಿಲ್ಲ
  • ಶಿವಮೊಗ್ಗದಲ್ಲಿ ಕೆಎಸ್‌ಸಿಎ ನಿರ್ದೇಶಕ, ಎಂಎಲ್‌ಸಿ ಡಿ.ಎಸ್.ಅರುಣ್ ಆರೋಪ
ಶಿವಮೊಗ್ಗ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್(IPL)ಪಂದ್ಯಗಳು ಕೈತಪ್ಪಿದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕೆಎಸ್‌ಸಿಎ(Ksca) ನಿರ್ದೇಶಕ, ಎಂಎಲ್‌ಸಿ ಡಿ.ಎಸ್.ಅರುಣ್ ಹೇಳಿದರು.
2008ರಿಂದ ಚಿನ್ನಸ್ವಾಮಿ ಕ್ರೀಡಾಂಗಣ(Chinnaswamy Stadium)ದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ಒಳಗೊಂಡಂತೆ 101 ಪಂದ್ಯಗಳು ನಡೆದಿವೆ. 745 ಅಂತಾರಾಷ್ಟ್ರೀಯ ಪಂದ್ಯಗಳು ಆಗಿವೆ. 40 ಸಾವಿರ ಪ್ರೇಕ್ಷಕರ ಸಾರ್ಮಥ್ಯ ಒಳಗೊಂಡಿದ್ದು, ಒಂದೇ ಒಂದು ಸಣ್ಣ ಘಟನೆಯೂ ಅಲ್ಲಿ ನಡೆದಿಲ್ಲ. ಆದರೆ ಸರ್ಕಾರದ ಆತುರದ ನಿರ್ಧಾರಕ್ಕೆ ಆರ್‌ಸಿಬಿ ವಿಜಯೋತ್ಸವ(RCB vijayostava)ವೇಳೆ 11 ಮಂದಿ ಜೀವ ಕಳೆದುಕೊಳ್ಳುವಂತಾಯಿತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
2025ರ ಜು.4ರಂದು ವಿಜಯೋತ್ಸವಕ್ಕೆ ಸರ್ಕಾರವೇ ಅನುಮತಿ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಇಡೀ ಸರ್ಕಾರವೇ ತಾವೇ ಐಪಿಎಲ್ ಕಪ್(IPL cup) ಗೆದ್ದಂತೆ ಸಂಭ್ರಮಾಚರಣೆ ಮಾಡಿಕೊಳ್ಳುವ ಭರದಲ್ಲಿ ಅನಾಹುತಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ ತದನಂತರ ತಮ್ಮ ಪಾತ್ರವಿಲ್ಲ ಎಂಬ ರಾಗ ತೆಗೆಯುತ್ತಿದ್ದಾರೆ. ಅಂದಿನ ಅವಘಡದಲ್ಲಿ ರಾಜ್ಯ ಸರ್ಕಾರದ ತಪ್ಪು ಏನೆಂಬುದು ಜನರಿಗೂ ಅರ್ಥವಾಗಿದೆ ಎಂದರು.
ತನ್ನ ತಪ್ಪು ಮುಚ್ಚಿಕೊಳ್ಳುವುದಕ್ಕೆ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಜಾನ್ ಕುನ್ಹಾ (John Cunha)ಅವರಿಗೆ ತನಿಖೆ ಜವಾಬ್ದಾರಿ ವಹಿಸಿತ್ತು. ಆದರೆ ಕುನ್ಹಾ ಅವರು ವರದಿ ನೀಡಿ ಏಳು ತಿಂಗಳು ಕಳೆದಿದೆ. ವರದಿ ಬಹಿರಂಗ ಪಡಿಸಿದರೆ ತಮ್ಮ ಲೋಪ ಬಯಲಾಗಲಿದೆ ಎಂಬ ಆತಂಕ ಸರ್ಕಾರವನ್ನು ಕಾಡುತ್ತಿದೆ ಎಂದರು.
ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ಎನ್.ರಾಜೇಂದ್ರ ಕಾಮತ್, ವಲಯ ಸಂಚಾಲಕ ಎಚ್.ಎಸ್.ಸದಾನಂದ, ಐಡಿಯಲ್ ಗೋಪಿ ಸುದ್ದಿಗೋಷ್ಠಿಯಲ್ಲಿದ್ದರು.

ಸಿಎಂ ಸಿದ್ದರಾಮಯ್ಯ ಚಕಾರ ಎತ್ತುತ್ತಿಲ್ಲ

ಆರ್‌ಸಿಬಿ ಕಪ್ ಗೆದ್ದಾಗ ತಾವೇ ಗೆದ್ದಂತೆ ಕಾಂಗ್ರೆಸ್ ಸರ್ಕಾರ ಸಂಭ್ರಮಿಸಿತ್ತು. ತದನಂತರ ಐಪಿಎಲ್ ಪಂದ್ಯಗಳನ್ನು ಯಾವುದೇ ಕಾರಣಕ್ಕೆ ಸ್ಥಳಾಂತರಗೊಳ್ಳುವುದಕ್ಕೆ ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹಲವು ಬಾರಿ ಹೇಳಿದ್ದಾರೆ. ಆದರೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಒಮ್ಮೆಯೂ ಚಕಾರ ಎತ್ತುತ್ತಿಲ್ಲ ಎಂದು ಡಿ.ಎಸ್.ಅರುಣ್ ಕಿಡಿಕಾರಿದರು.
"

ಆರ್‌ಸಿಬಿ ತಂಡ ತನ್ನ ತವರು ನೆಲವನ್ನು ಬದಲಿಸುತ್ತಿದ್ದು, ಪುಣೆಗೆ ಸ್ಥಳಾಂತರಗೊಳ್ಳಲಿದೆ. ಆದರೆ ಸರ್ಕಾರದ ಒಬ್ಬರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಸರ್ಕಾರದ ನ್ಯೂನ್ಯತೆ, ನಡಾವಳಿಯಿಂದ ಆರ್‌ಸಿಬಿ ಪುಣೆಗೆ ಹೋಗಲಿಕ್ಕೆ ನಿರ್ಧಾರ ಮಾಡಿದೆ. ಐಪಿಎಲ್ ಪಂದ್ಯಗಳು ಸ್ಥಳಾಂತರಗೊಂಡರೆ ಸರ್ಕಾರಕ್ಕೆ ಆದಾಯ ಕುಸಿತವಾಗಲಿದೆ. ಒಮ್ಮೆ ಸ್ಥಳಾಂತರಗೊಂಡಿದ್ದೆ ಆದಲ್ಲಿ ಪುನಃ ಬೆಂಗಳೂರಿಗೆ ಕರೆತರುವುದು ಸುಲಭವಲ್ಲ.