ರಿಪ್ಪನ್‌ಪೇಟೆಯಲ್ಲಿ ದೊರೆತಿರುವ ಪುರಾತನ ಕಾಲದ ವಿಗ್ರಹ. 
ಶಿವಮೊಗ್ಗ

ಕೆರೆಯಲ್ಲಿ ಜೈನ ತೀರ್ಥಂಕರರ ವಿಗ್ರಹ ಪತ್ತೆ

ರಿಪ್ಪನ್‌ಪೇಟೆ: ಪಟ್ಟಣದ ಗವಟೂರು ಕೆರೆ ಹೂಳೆತ್ತುವ ಸಂದರ್ಭದಲ್ಲಿ ಮಣ್ಣಿನಲ್ಲಿ ಹೂತು ಹೋಗಿದ್ದ ಪುರಾತನ ಕಾಲದ ವಿಗ್ರಹವೊಂದು ಪತ್ತೆಯಾಗಿದೆ.
ಪದ್ಮಾಸನದಲ್ಲಿ ಕುಳಿತಿರುವ ಪುರುಷಾಕೃತಿಯ ವಿಗ್ರಹ, ಮತ್ತೊಂದೆಡೆ ಪಾಣಿಪೀಠ ದೊರೆತಿದೆ. ಜೈನ ಪರಂಪರೆಗೆ ಸೇರಿದ ತೀರ್ಥಂಕರರ ಮೂರ್ತಿ ಇದಾಗಿದೆ. ಒಂದು ಸಾವಿರ ವರ್ಷಗಳಿಗೂ ಹಿಂದಿನದ್ದು ಎನ್ನಲಾಗಿದೆ. ತಾಪಂ ಇಒ ನರೇಂದ್ರಕುಮಾರ್, ಪಿಡಿಒ ನಾಗರಾಜ್, ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಸ್ಥಳಕ್ಕಾಗಮಿಸಿ ವೀಕ್ಷಿಸಿದರು.
ತಹಸೀಲ್ದಾರ್, ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕೆರೆಯಲ್ಲಿದ್ದ ವಿಗ್ರಹಗಳನ್ನು ಹೊರತೆಗೆದಿದ್ದು, ಶುಚಿಗೊಳಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಇಡಲಾಗಿದೆ. ವಿಗ್ರಹ ಅಧ್ಯಯನದ ನಂತರ ಮತ್ತಷ್ಟು ಮಾಹಿತಿ ದೊರೆಯಲಿದೆ.