- ಭದ್ರಾವತಿ ಬಿಟ್ಟು ನಾನು ದೆಹಲಿಗೂ ಹೋಗಲ್ಲ, ಎಲ್ಲಿಗೂ ಹೋಗಲ್ಲ
- ಜಿಲ್ಲೆಯಲ್ಲಿ ನಾನೇ ಹಿರಿಯ ಶಾಸಕ, ನನಗೇ ಮೊದಲು ಸಚಿವ ಸ್ಥಾನ ಕೊಡಬೇಕಿತ್ತು
- ಶಿವಮೊಗ್ಗದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿಕೆ
ಶಿವಮೊಗ್ಗ: ಭದ್ರಾವತಿ(Bhadravati) ಬಿಟ್ಟು ನಾನು ದೆಹಲಿಗೂ ಹೋಗುವುದಿಲ್ಲ, ಎಲ್ಲಿಗೂ ಹೋಗುವುದಿಲ್ಲ. ಸಚಿವ ಸ್ಥಾನ ಕೊಡುವಂತೆ ಬೇಡಿಕೆ ಇಟ್ಟಿದ್ದೇನೆ. ಕೊಡುವುದು, ಬಿಡುವುದು ಸಿಎಂ, ಡಿಸಿಎಂಗೆ ಬಿಟ್ಟಿದ್ದು. ಆದರೂ ಈ ಬಾರಿ ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ(Minister position) ಕೊಟ್ಟರೂ ಸಂತೋಷ, ಕೊಡದಿದ್ದರೂ ಸಂತೋಷ. 30 ಶಾಸಕರು ದೆಹಲಿಗೆ ಹೋಗುತ್ತಿರುವುದು ಅವರ ವೈಯಕ್ತಿಕ ವಿಚಾರ. ನಾನು ಮಾತ್ರ ದೆಹಲಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನ ಕೊಡಿ ಎಂದು ಕೇಳುವುದು ನನ್ನ ಧರ್ಮ. ಆದರೆ ಕೊಡುವುದು, ಬಿಡುವುದು ಅವರ ಧರ್ಮ. ಜಿಲ್ಲೆಯಲ್ಲಿ ನಾನೇ ಹಿರಿಯ ಶಾಸಕ(Senior MLA). ನಾಲ್ಕು ಬಾರಿ ಗೆದ್ದಿದ್ದೇನೆ. ಹಾಗೆ ನೋಡಿದರೆ ನನಗೇ ಮೊದಲು ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ಕೊಡಲಿಲ್ಲ. ನಾನು ನಿಷ್ಠಾವಂತ ಕಾರ್ಯಕರ್ತ. ಆದರೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ. ಯಾವತ್ತೂ ಹಾಗೆಯೇ ಇರುತ್ತೇನೆ ಎಂದರು.