ವಾಲ್ಮೀಕಿ ಕಪ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೆ ಬಂದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿ ಕರೆದೊಯ್ದರು.
- ನನಗೂ ಬ್ಯಾಟಿಂಗ್ ಚೆನ್ನಾಗಿ ಆಡಲು ಬರುತ್ತದೆ
- ಕೆಪಿಸಿಸಿ ಅಧ್ಯಕ್ಷ ಕಪ್ ಬಗ್ಗೆ ನಾನು ಈಗ ಮಾತನಾಡಲ್ಲ
- ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ
ಶಿವಮೊಗ್ಗ: ನನಗೂ ಬ್ಯಾಟಿಂಗ್(Batting) ಚೆನ್ನಾಗಿ ಆಡಲು ಬರುತ್ತದೆ. ಅದೇ ರಾಜಕೀಯವಾಗಿಯೂ ಗೂಗ್ಲಿ(Google) ಎಂಬ ಚೆಂಡನ್ನು ಹಾಕಲೇಬೇಕು. ಇಲ್ಲವಾದಲ್ಲಿ ಯಶಸ್ಸು ಸಿಗುವುದಿಲ್ಲ. ಆ ಬಗ್ಗೆ ಅವಕಾಶ ಬಂದಾಗ ನೋಡೋಣವೆಂದು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.
ನಗರದ ಹೆಲಿಪ್ಯಾಡ್(Helipad)ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮಿಕಿ ಯುವ ಸಂಘಟನೆಯಿಂದ ಆಯೋಜನೆಗೊಂಡಿದ್ದ ಕ್ರಿಕೆಟ್ ಪಂದ್ಯಾವಳಿ(Cricket Turnament) ಉದ್ಘಾಟಿಸಲು ಶಿವಮೊಗ್ಗಕ್ಕೆ ಬಂದಿದ್ದೇನೆ. ನಾನೂ ಕ್ರಿಕೆಟ್ ಚೆನ್ನಾಗಿ ಆಡುತ್ತೇನೆ. ಗೂಗ್ಲಿಯನ್ನೂ ಹಾಕುತ್ತೇನೆ ಎಂದರು.
ಕೆಪಿಸಿಸಿ(Kpcc) ಅಧ್ಯಕ್ಷ ಕಪ್ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಅದು ದೊಡ್ಡ ಮ್ಯಾಚ್ ಆಗಿದ್ದು, ಮುಂದೆ ನೋಡೋಣ. ಸದ್ಯ ನಾನೀಗ ಸಿಎಂ ಕಪ್(Cm cup) ರೇಸ್‌ನಲ್ಲಿಲ್ಲ. ಸಿಎಂ ಕಪ್ ಯಾರಿಗೆ ಕೊಡಬೇಕು, ಬಿಡಬೇಕು ಎಂಬುದನ್ನು ದೆಹಲಿ ಹಾಗೂ ರಾಜ್ಯಮಟ್ಟದಲ್ಲಿ ತೀರ್ಮಾನ ಮಾಡಲಾಗುತ್ತದೆ. ಅಲ್ಲಿ ಕೇಳಿದರೆ ಉತ್ತರ ಸಿಗಬಹುದು ಎಂದು ಮಾಧ್ಯಮಗಳಿಗೆ ತಿಳಿಸಿದರು.
ಯಾರನ್ನು ಸಂಪುಟದಿಂದ ತೆಗಿಯಬೇಕು ಅಥವಾ ಮುಂದುವರಿಸಬೇಕು ಎಂಬ ನಿರ್ಧಾರ ಹೈಕಮಾಂಡ್‌ನದ್ದು. ಬಜೆಟ್ ನಂತರ ಅಧಿಕಾರ ಬದಲಾವಣೆ ಬಗ್ಗೆ ಹೈಕಮಾಂಡ್‌ಗೇ ಕೇಳಬೇಕು. ಅಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗಲಿದೆ ಎಂದರು.