ಹುಬ್ಬಳ್ಳಿಯಲ್ಲಿ ಜಿಮ್ ತರಬೇತುದಾರ ಲವ್‌ಜಿಹಾದ್‌ಗೆ ಯತ್ನಿಸಿದ್ದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖರಾದ ರಮೇಶ್‌ಬಾಬು, ಜಗದೀಶ್, ಸಿ.ರಮೇಶ್, ನಾಗೇಶ್, ಪ್ರದೀಪ್, ಮುಕುಂದ ಮುಂತಾದವರು ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. 
ಶಿವಮೊಗ್ಗ

ಹುಬ್ಬಳ್ಳಿ ಪ್ರಕರಣ ಸಮಗ್ರ ತನಿಖೆಯಾಗಲಿ I hubballi investigation

ಪ್ರಮುಖ ಮುಖ್ಯಾಂಶಗಳು

  • ಹಿಂದುಪರ ಸಂಘಟನೆ ಮನವಿ
  • ಸಮೀರ್ ಮುಲ್ಲಾ ವಿರುದ್ಧ ಕ್ರಮಕ್ಕೆ ಆಗ್ರಹ
ಶಿವಮೊಗ್ಗ: ಇತ್ತೀಚೆಗೆ ಹುಬ್ಬಳ್ಳಿ (hubballi) ಯಲ್ಲಿ ಸಮೀರ್ ಮುಲ್ಲಾ ಮತ್ತು ತೈಸೀಮ್ ಮುಲ್ಲಾ ಎಂಬುವರು ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ವಂಚಿಸಿರುವುದು ಲವ್ ಜಿಹಾದ್‌ (love jihad) ನ ಮುಂದುವರಿದ ಭಾಗವಾಗಿದೆ. ಅವರಿಬ್ಬರ ಬಗ್ಗೆ ಸಮಗ್ರ ತನಿಖೆ (investigation) ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖರು ಬುಧವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಜಿಮ್ ನಡೆಸುತ್ತಿದ್ದ ಸಮೀರ್ ಮುಲ್ಲಾ ಹಿಂದೂ ಯುವತಿಯರೊಂದಿಗೆ ಸ್ನೇಹ ಬೆಳೆಸಿ ಅವರಿಗೆ ಪಾನೀಯಗಳಲ್ಲಿ ಮಾದಕ ವಸ್ತು ಬೆರೆಸಿ ಅತ್ಯಾಚಾರ ನಡೆಸಿ, ನಗ್ನ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಬ್ಲಾೃಕ್‌ಮೇಲ್ ಮಾಡುತ್ತಿದ್ದ. ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯ ಮಾಡುತ್ತಿದ್ದ ಎಂಬ ಆರೋಪವಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಮೀರ್ ಕೃತ್ಯಕ್ಕೆ ಆತನ ಸಹೋದರಿ ತೈಸೀಮ್ ಮುಲ್ಲಾ ಸಂಚಾಲಕಿಯಂತೆ ಕಾರ್ಯ ನಿರ್ವಹಿಸುತ್ತಿದ್ದಳು. ಹಿಂದೂ ಯುವತಿಯರನ್ನು ತನ್ನ ಸಹೋದರನಿಗೆ ಪರಿಚಯಿಸಿ ಮೋಸದಿಂದ ಈ ಜಾಲದಲ್ಲಿ ಸಿಲುಕಿಸುತ್ತಿದ್ದಳು ಎಂಬ ಆರೋಪವಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ರಾಜ್ಯದ ಅನೇಕ ಕಡೆ ಪಿಎಫ್‌ಐಗೆ ಸಂಬಂಧಿಸಿದ ಶಾಹೀನ್ ಗ್ಯಾಂಗ್ ಎಂಬ ಜಾಲವು ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಪ್ರಕರಣಗಳು ಬಹಿರಂಗವಾಗಿವೆ. ಕೆಲವು ಜಿಮ್‌ಗಳು, ಫಿಟ್ನೆಸ್ ಕೇಂದ್ರ ಹಾಗೂ ಮಸಾಜ್ ಕೇಂದ್ರಗಳು ಮತಾಂತರದ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದು ಸಂಘಟಿತ ಸಂಚು. ಇಂತಹ ಜಿಮ್ ಜಾಲದ ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟವರ ಮೊಬೈಲ್, ಡಿಜಿಟಲ್ ಸಾಧನಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲ ಜಿಮ್‌ಗಳಲ್ಲಿ ಸಿಸಿ ಟಿವಿ ವ್ಯವಸ್ಥೆ, ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆಗಳು ಇರುವುದನ್ನು ಖಚಿತಪಡಿಸಬೇಕು. ಮಹಿಳಾ ವಿಭಾಗಗಳಿಗೆ ಮಹಿಳಾ ತರಬೇತುದಾರರನ್ನೇ ನೇಮಕ ಮಾಡಬೇಕು. ಉತ್ತರ ಪ್ರದೇಶದಲ್ಲಿರುವಂತೆ ಜೀರೋ ಟಾಲರೆನ್ಸ್ ನೀತಿ ಅನುಸರಿಸಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಸಿ.ರಮೇಶ್, ಪ್ರಫುಲ್ಲಚಂದ್ರ, ಜಗದೀಶ್, ಶಿವರಾಂ, ರಮೇಶ್‌ಬಾಬು, ಪರಮೇಶ್ವರ್, ನಾಗೇಶ್, ಬಸವರಾಜ್, ರೇಖೇಶ್ ಮಾನೆ, ಪ್ರದೀಪ್, ಮುಕುಂದ ಇತರರಿದ್ದರು.