ಸೊರಬ ತಾಲೂಕಿನ ಸಾರೆ ಮರುರೂರುನ ಗೌರಮ್ಮ ಅವರ ಮನೆ ಮೇಲೆ ಮರ, ವಿದ್ಯುತ್ ಕಂಬ ಬಿದ್ದಿರುವುದು.
ಸೊರಬ: ತಾಲೂಕಿನ ಹಲವೆಡೆ ಮಳೆ, ಗಾಳಿಯಿಂದ ಮನೆಗಳ ಮೆಲೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಶನಿವಾರ ಮತ್ತು ಭಾನುವಾರ ಬೀಸಿದ ಭಾರಿ ಗಾಳಿ ಮಳೆಗೆ ಉಳವಿ ಗ್ರಾಮದಲ್ಲಿ ಮರ ಬಿದ್ದು ಜಯರಾಮ ಎಂಬುವರ ಮನೆಗೆ ಹಾನಿಯಾಗಿದೆ. ಗುಡವಿ ಗ್ರಾಪಂನ ಸಾರೆ ಮರುರೂರು ಗ್ರಾಮದಲ್ಲಿ ಮರ ಹಾಗೂ ವಿದ್ಯುತ್ ಕಂಬ ಬಿದ್ದು ಗೌರಮ್ಮ ಎಂಬವರ ಮನೆಗೆ ನಷ್ಟವಾಗಿದೆ. ಜಡೆ ಹೋಬಳಿ ಸಾಬಾರ ಗ್ರಾಮದ ತಿರುಕನಗೌಡ ಯಾದವ್ ವಾಸದ ಮನೆಯ ಗುಡೆ ಕುಸಿದಿದೆ.
ಎಣ್ಣೆಕೊಪ್ಪ ಗ್ರಾಮದ ಯೋಗೇಶಪ್ಪ ಅವರ ಕಿರಾಣಿ ಅಂಗಡಿ ಛಾವಣಿಯ ತಗಡುಗಳು ಹಾರಿ ಹೋಗಿವೆ. ಸಮನವಳ್ಳಿ ಗ್ರಾಮದ ಚಂದ್ರಕಲಾ ಅವರ ಮನೆ ಮೇಲೆ ಮರ ಬಿದ್ದಿದೆ. ಆನವಟ್ಟಿಯ ರಾಘವೇಂದ್ರ ಬಡಾವಣೆ ಶೈಲಜಾ ಎಂಬವರ ಮನೆಯ ಛಾವಣಿಯ ತಗಡುಗಳು ಹಾರಿ ಹೋಗಿವೆ. ಸ್ಥಳಕ್ಕೆ ಕಂದಾಯ ಆಧಿಕಾರಿಗಳು ಭೇಟಿ ನೀಡಿದ್ದರು.