ಶಿವಮೊಗ್ಗ ವಿನೋಬನಗರ ಠಾಣೆ 
ಶಿವಮೊಗ್ಗ

ಮನೆಗೆ ನುಗ್ಗಿ 2.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು | jewellery Theft

ಪ್ರಮುಖ ಮುಖ್ಯಾಂಶಗಳು

  • ಆಶ್ರಯ ಬಡಾವಣೆಯ ‘ಬಿ’ ಬ್ಲಾಕ್‌ನ ಭರತ್ ಮನೆಯಲ್ಲಿ ಕಳ್ಳತನ
  • ಮನೆಗೆ ಬೀಗ ಹಾಕಿ ಭದ್ರಾವತಿಯಲ್ಲಿರುವ ಅತ್ತೆ ಮನೆಗೆ ಹೋಗಿದ್ದ ಭರತ್
  • ಶಿವಮೊಗ್ಗ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಮನೆಗೆ ನುಗ್ಗಿ 2.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ(jewellery)ಕಳವು ಮಾಡಲಾಗಿದೆ. 
‘ಬಿ’ ಬ್ಲಾಕ್‌ನ ಭರತ್ ಎಂಬುವರ ಮನೆಯಲ್ಲಿ ಕಳ್ಳತನ(Theft) ನಡೆದಿದೆ. ಭರತ್ ಅವರು ಮಾ.27ರಂದು ಮನೆಗೆ ಬೀಗ ಹಾಕಿಕೊಂಡು ಭದ್ರಾವತಿಯಲ್ಲಿರುವ ಅತ್ತೆ ಮನೆಗೆ ಹೋಗಿದ್ದರು. 
ಮರುದಿನ ಬೆಳಗ್ಗೆ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಿಟಕಿ ಗಾಜು ಹಾಗೂ ಬಾಗಿಲನ್ನು ಒಡೆದು ಒಳ ನುಗ್ಗಿರುವ ಕಳ್ಳರು ಮನೆಯ ಬೀರುವಿನಲ್ಲಿದ್ದ 28 ಗ್ರಾಂ ಚಿನ್ನದ ಸರ, ತಾಳಿ, ಓಲೆ, ಉಂಗುರ ಹಾಗೂ 150 ಗ್ರಾಂ ಬೆಳ್ಳಿಯ ಕಾಲು ಚೈನ್ ಸೇರಿ ಇತರೆ ವಸ್ತುಗಳನ್ನು ಕಳವು ಮಾಡಿದ್ದಾರೆ. ವಿನೋಬನಗರ ಠಾಣೆ(Vinobanagar Station)ಯಲ್ಲಿ ಪ್ರಕರಣ ದಾಖಲಾಗಿದೆ.