ಹೊಸನಗರ ತಾಲೂಕಿನ ಸಂಪೆಕಟ್ಟೆಯಲ್ಲಿ ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮವನ್ನು ಸಾಹಿತಿ ಅಂಬ್ರಯ್ಯಮಠ ಉದ್ಘಾಟಿಸಿದರು. ಗಣೇಶಮೂರ್ತಿ, ಚಂದ್ರ ಶೆಟ್ಟಿ, ಟಿ.ಕ್ಷಮಾ ಇತರರಿದ್ದರು. 
ಶಿವಮೊಗ್ಗ

ಇತಿಹಾಸ, ಸಾಹಿತ್ಯ ಪರಸ್ಪರ ಪೂರಕ | Charity lecture

ಹೊಸನಗರ: ಇತಿಹಾಸ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖ. ಇತಿಹಾಸವನ್ನು ಕೃತಿಯ ರೂಪದಲ್ಲಿ ಕಟ್ಟಿಕೊಟ್ಟಾಗ ಅದು ಸಾಹಿತ್ಯ ಎನಿಸಿಕೊಳ್ಳುತ್ತದೆ ಎಂದು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶಮೂರ್ತಿ ನಾಗರಕೊಡಿಗೆ ಹೇಳಿದರು.
ತಾಲೂಕಿನ ಸಂಪೆಕಟ್ಟೆ ಗ್ರಾಮದ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಕಸಾಪದಿಂದ ಸಾವಿತ್ರಮ್ಮ ಅಂಬ್ರಯ್ಯಮಠ ದತ್ತಿ ನಿಧಿ ಮತ್ತು  ಶಾಮಣ್ಣ ಉಡುಪ ನಗರ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದತ್ತಿ ದಾನಿಗಳು ತಮ್ಮ ಪ್ರೀತಿ ಪಾತ್ರರ ಹೆಸರಿನಲ್ಲಿ ಇಟ್ಟ ಹಣದ ಬಡ್ಡಿಯಲ್ಲಿ ಸಾಹಿತ್ಯ ಪರಿಷತ್ ದತ್ತಿನಿಧಿ ಕಾರ್ಯಕ್ರಮ ನಡೆಸುತ್ತಿದೆ. ಇದು ಜ್ಞಾನವನ್ನು ಎಲ್ಲರಿಗೂ ಪಸರಿಸಲು ಅನುಕೂಲವಾಗಿದೆ ಎಂದರು. 
ಸಾಹಿತಿ ಡಾ. ಶಾಂತರಾಮ ಪ್ರಭು ಮಾತನಾಡಿ, ಸಾಹಿತ್ಯ ಮತ್ತು ಇತಿಹಾಸಕ್ಕೆ ಅವಿನಾಭಾವ ಸಂಬಂಧವಿದೆ. ಇತಿಹಾಸ ದಾಖಲಿಸುವುದು ಕೂಡ ಸಾಹಿತ್ಯ ಎಂದರು. ದತ್ತಿ ದಾನಿ, ಸಾಹಿತಿ ಅಂಬ್ರಯ್ಯಮಠ ಮಾತನಾಡಿ, ಇತಿಹಾಸ, ಪ್ರಚಲಿತ, ಯಾವುದೇ ಶಾಸನಗಳಾಗಲಿ ಅಧ್ಯಯನ ಮಾಡಿ ದಾಖಲಿಸುವುದು ಸಾಹಿತ್ಯದ ಒಂದು ಭಾಗ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಟಿ.ಕ್ಷಮಾ, ಕಾರ್ತಿಕ್, ನೀತಾ, ಅಶ್ವಿನಿ ಪಂಡಿತ್, ಶಿಕ್ಷಕರು, ಪಾಲಕರು, ಮಕ್ಕಳು ಇದ್ದರು.