ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಡೇನಂದಿಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಹೆಲಿಕಾಪ್ಟರ್ ಪಯಣಕ್ಕೆ ಸಜ್ಜುಗೊಳ್ಳುತ್ತಿರುವ ಹ್ಯಾಲಿಪ್ಯಾಡ್ ವೀಸುತ್ತಿರುವ ಜನತೆ.
ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 80ನೇ ಸ್ವಾತಂತ್ರೊ$್ಯತ್ಸವದ ಅಂಗವಾಗಿ ವಿಶ್ವಾಗ್ರ ಸಂಸ್ಥೆಯಿಂದ ಹೆಲಿಕಾಪ್ಟರ್ ಪ್ರಯಾಣ ಆಯೋಜಿಸಲಾಗಿದೆ.
ಕಡೆನಂದಿಹಳ್ಳಿ ಗ್ರಾಮದ ಶಾಲೆಗೆ ಈಗಾಗಲೇ ಸಂಸ್ಥೆಯವರು ಇಬ್ಬರು ಅತಿಥಿ ಶಿಕ್ಷಕರು ಹಾಗೂ ಕಂಪ್ಯೂಟರ್ ಸೌಲಭ್ಯ ನೀಡಿದ್ದಾರೆ. ಸ್ವಾತಂತ್ರ್ಯೋತ್ಸವವನ್ನು ಕೇವಲ ಧ್ವಜಾರೋಹಣ ಮತ್ತು ಸಾಂಸತಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಮಕ್ಕಳಿಗೆ ಹೊಸ ಅನುಭವ ನೀಡುವ ಪ್ರಯತ್ನ ಇದಾಗಿದೆ. ಈಗಾಗಲೇ ಸರ್ಕಾರದ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದು ಗ್ರಾಮದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಕುಮಾರ್ ಮಟ್ಟೀಮನಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಇಂತಹ ವಿಶೇಷ ಅನುಭವಗಳನ್ನು ನೀಡುವುದರಿಂದ ಅವರಲ್ಲಿ ಆತ್ಮವಿಶ್ವಾಸ, ವೈಾನಿಕ ಮನೋಭಾವ, ಹೊಸತನದ ಚಿಂತನೆ ಹಾಗೂ ದೊಡ್ಡ ಕನಸುಗಳನ್ನು ಕಾಣುವ ಮನೋಭಾವ ಬೆಳೆಸಲು ಸಾಧ್ಯವಾಗಲಿದೆ. ದೂರದಿಂದ ಮಾತ್ರ ಹೆಲಿಕಾಪ್ಟರ್ ನೋಡುತ್ತಿದ್ದ ಮಕ್ಕಳು ಅದರಲ್ಲಿ ಕುಳಿತು ಆಕಾಶದಲ್ಲಿ ಹಾರುವ ಅವಕಾಶ ಪಡೆಯುತ್ತಿರುವುದು ಕಾರ್ಯಕ್ರಮದ ವಿಶೇಷ ಎಂದು ವಿಶ್ವಾಗ್ರ ಸಂಸ್ಥೆ ಸಂಸ್ಥಾಪಕ ಡಾ. ಎ.ಶಿವಕುಮಾರ್ ಹೇಳಿದ್ದಾರೆ.
ಆ.15ರ ಕಾರ್ಯಕ್ರಮದಲ್ಲಿ ವಿಶ್ವಾಗ್ರ ಸಲ್ಯೂಷನ್ಸ್ ನಿರ್ದೇಶಕ ಲಿಂಗರಾಜ್ ಚವ್ಹಾಣ್, ಗೋಕಾಕ್ನ ಮನಸಾ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ್ ಕರ್ಜಗಿಮಠ, ವಿಶ್ವಾಗ್ರ ಫೌಂಡೇಶನ್ ನಿರ್ದೇಶಕಿ ಅರ್ಚನಾ ಶಿವಕುಮಾರ್, ದತ್ತು ಸಮಿತಿಯ ಶಿವಕುಮಾರ್ ಆರಾಧ್ಯ ಸೇರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಸರ್ಕಾರದ ಜತೆಗೆ ಜನರ ಮೇಲೂ ಇದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನ ಹಮ್ಮಿಕೊಂಡಿದ್ದೇವೆ. ಸರ್ಕಾರಿ ಶಾಲೆಗಳತ್ತ ಎಲ್ಲರ ಗಮನ ಸೆಳೆಯಬೇಕು. ಜನರು ಸರ್ಕಾರಿ ಶಾಲೆಗಳತ್ತ ಮತ್ತಷ್ಟು ಒಲವು ತೋರುವಂತೆ ಮಾಡಬೇಕು ಎಂಬ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
> ಡಾ. ಎ.ಶಿವಕುಮಾರ್ , ವಿಶ್ವಾಗ್ರ ಸಂಸ್ಥೆ ಸಂಸ್ಥಾಪಕ