ಭದ್ರಾವತಿಯಲ್ಲಿ ಹಳದಮ್ಮ ದೇವಿ ಸಿಡಿ ಉತ್ಸವಕ್ಕೆ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಚಾಲನೆ ನೀಡಿದರು. ಲ$್ಮಣ, ಜಯಪ್ರಕಾಶ್, ಸಂತೋಷ್, ಮಂಜುನಾಥ್, ಚಂದ್ರಶೇಖರ್ ಇತರರಿದ್ದರು.
- ಹಳದಮ್ಮ ದೇವಿ ಜಾತ್ರೆ ಸಿಡಿ ಉತ್ಸವ
- ಭದ್ರಾವತಿ ಹಳೇನಗರದ ಗ್ರಾಮದೇವತೆ ಹಳದಮ್ಮ ದೇವಿ
- ಸಿಡಿ ಕಂಬಕ್ಕೆ ಸಂತೋಷ್ಕುಮಾರ್ ಪೂಜೆ
ಭದ್ರಾವತಿ: ಹಳೇನಗರದ ಗ್ರಾಮದೇವತೆ ಹಳದಮ್ಮ ದೇವಿ ಜಾತ್ರಾ ಮಹೋತ್ಸವದ ಸಿಡಿ ಉತ್ಸವ ಸಂಭ್ರಮದಿಂದ ನೆರವೇರಿತು.
ದೇವಸ್ಥಾನ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ನೂತನ ಸಿಡಿ ಕಂಬಕ್ಕೆ ಸಂತೋಷ್ಕುಮಾರ್ ಪೂಜೆ ಸಲ್ಲಿಸಿ ಸಿಡಿ ಕಂಬದ ತುದಿಯನ್ನೇರಿದರು. ಸಿಡಿ ಕಂಬ ಹಿಡಿದಿದ್ದ ಇತರರು ಹಾಗೂ ದೇವಸ್ಥಾನ ಸಮಿತಿಯ ಇತರರು ಸಿಡಿ ಕಂಬಕ್ಕೆ ತೂಗು ಹಾಕಿದ್ದ ಸಂತೋಷ್ಕುಮಾರ್ ಅವರನ್ನು ಮೂರು ಸುತ್ತು ಪ್ರದಣೆ ಹಾಕಿಸಿ ನಂತರ ಕೆಳಗೆ ಇಳಿಸಲಾಯಿತು. ನಂತರ ಕಂಬದ ತುದಿಗೆ ತೊಟ್ಟಿಲು ಕಟ್ಟಿ ಹರಕೆಯಂತೆ ಮಕ್ಕಳನ್ನು ಕೂರಿಸಿ ಸಿಡಿ ಆಡಿಸಿದರು.
ಜೆಡಿಎಸ್ ಮುಖಂಡರಾದ ಶಾರಾದಾ ಅಪ್ಪಾಜಿ ಸಿಡಿ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕರ್ತರೊಂದಿಗೆ ಆಗಮಿಸಿದ ಸಂಸದ ಬಿ.ವೈ.ರಾವೇಂದ್ರ ಹಳದಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಸಮಿತಿ ಅಧ್ಯ ಲ$್ಮಣ, ಜಯಪ್ರಕಾಶ್, ಸಂತೋಷ್, ಮಂಜುನಾಥ್, ಚಂದ್ರಶೇಖರ್, ಗಿರೀಶ್, ಚನ್ನೇಶ್, ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಅನುಪಮಾ ಚನ್ನೇಶ್, ನರಸಿಂಹಾಚಾರ್ ಇತರರಿದ್ದರು.