ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಮಠದ ಆವರಣದಲ್ಲಿ ಶ್ರೀ ಕುಂದಕುಂದ ವಿದ್ಯಾಪೀಠದ ನೂತನ ಕಟ್ಟಡಕ್ಕೆ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ದೇವೇಂದ್ರ ಜೈನ್, ಮಂಜಪ್ಪ ಮುಂತಾದವರಿದ್ದರು. 
ಶಿವಮೊಗ್ಗ

ಮಕ್ಕಳಲ್ಲಿ ಆಸಕ್ತಿ ವೃದ್ಧಿಸುವ ಗುರುಕುಲ ಶಿಕ್ಷಣ

ಸೋಮಶೇಖರ ಎನ್
ರಿಪ್ಪನ್‌ಪೇಟೆ: ಗುರುಕುಲ ಶಿಕ್ಷಣದಿಂದ ಭಾರತೀಯ ಜೈನ ಪರಂಪರೆ ಮುಂದುವರಿಯಲು ಸಹಕಾರಿಯಾಗಿದೆ ಎಂದು ಹೊಂಬುಜ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹೊಂಬುಜ ಜೈನಮಠದ ಆವರಣದಲ್ಲಿ ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಗುರುಕುಲ ಶಿಕ್ಷಣದಲ್ಲಿ ಜೈನ ಧರ್ಮದ ಶಾಸ್ತ್ರ, ಆರಾಧನೆ, ಚರ್ಚೆಗಳ ಮಹತ್ವ, ಗ್ರಂಥ ಅಧ್ಯಾಯ, ಯೋಗ, ಜ್ಯೋತಿಷ ಶಾಸ್ತ್ರ, ಸಂಗೀತ, ನಾಟ್ಯ, ನಾಟಕಗಳ ಆಸಕ್ತಿ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಏಳು ದಶಕದ ಹಿಂದೆ ಶ್ರೀ ಅರಹದ್ದಾಸ ಸ್ವಾಮೀಜಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗುರುಕುಲ ನಿರ್ಮಿಸಿದ್ದರು. ಧಾರ್ಮಿಕ, ನೈತಿಕ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಸುಸಂಸ್ಕೃತರಾಗಿದ್ದು, ಸಮಾಜದಲ್ಲಿ ಮನ್ನಣೆ ಪಡೆದುಕೊಂಡಿದ್ದಾರೆ ಎಂದರು.
ವಿದ್ಯಾರ್ಜನೆಗೆ ಅಗತ್ಯವಿದ್ದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ದಾನಿಗಳು ಸಹಕಾರ ನೀಡುವುದರೊಂದಿಗೆ ಶೀಘ್ರವಾಗಿ ಅನುಷ್ಠಾನಗೊಂಡು ಕಲಿಯುವವರಿಗೆ ಉಪಯುಕ್ತವಾಗಲಿ ಎಂದು ಪ್ರಾರ್ಥಿಸಿದರು. ಮುಖಂಡರಾದ ದೇವೇಂದ್ರ ಜೈನ್, ಮಂಜಪ್ಪ ಮುಂತಾದವರಿದ್ದರು.