ಹೊಸನಗರದ ಸಂಪೇಕಟ್ಟೆಯಲ್ಲಿ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಆರ್.ಎಂ.ಮಂಜುನಾಥ ಗೌಡ, ಟಿ.ಎಂ.ರಮೇಶ, ಪ್ರಸನ್ನ, ಇಂದೂಧರ ಗೌಡ ಇತರರಿದ್ದರು. 
ಶಿವಮೊಗ್ಗ

ಸಹಕಾರ ಕ್ಷೇತ್ರದ ಮೇಲಿದೆ ಹೆಚ್ಚಿನ ಜವಾಬ್ದಾರಿ

ಪ್ರಮುಖ ಮುಖ್ಯಾಂಶಗಳು

  • ಸಂಪೇಕಟ್ಟೆ ಸಹಕಾರ ಸಂಘದ ಕಟ್ಟಡ ಉದ್ಘಾಟನೆ
ಹೊಸನಗರ: ಆರ್ಥಿಕ ಶಿಸ್ತು ಇದ್ದರೆ ಮಾತ್ರ ವ್ಯವಹಾರ ಉತ್ತಮವಾಗುತ್ತದೆ. ರೈತರಿಗೆ ಬೆಳೆ ಸುಲಭವಾಗಿ ದಕ್ಕುತ್ತಿಲ್ಲ. ವಿವಿಧ ರೋಗಗಳಿಂದ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಜವಾಬ್ದಾರಿ ಹೆಚ್ಚಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಸಂಪೇಕಟ್ಟೆಯಲ್ಲಿ 65 ಲಕ್ಷ ರೂ. ವೆಚ್ಚದ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಹಕಾರ  ಕ್ಷೇತ್ರದಲ್ಲೂ ಮೀಸಲಾತಿ ಬಂದಿದೆ. ಅದು ಸರಿಯಲ್ಲ. ಆಡಳಿತ ಮಂಡಳಿಗೆ ಸ್ವಾತಂತ್ರೃ ನೀಡಬೇಕಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಗ್ರಾಮಾಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸುತ್ತಿದೆ. ರೈತರಿಗೆ ಒಂದೇ ಸೂರಿನಲ್ಲಿ ಎಲ್ಲ ಸೌಲಭ್ಯ ಸಿಗಬೇಕು. ಸರ್ಕಾರದ ಅನುದಾನ ತೆಗೆದುಕೊಳ್ಳದೆ ಸಂಪೇಕಟ್ಟೆಯಲ್ಲಿ ನೂತನ ಕಟ್ಟಡ ನಿರ್ಮಿಸಿರುವುದು ಸಾಧನೆ. ಸಂಪೂರ್ಣ ಗಣಕೀಕರಣ ಮಾಡಿ ಆನ್‌ಲೈನ್ ಎಂಟ್ರಿ ಮಾಡುವುದರಲ್ಲಿ ಸಂಪೇಕಟ್ಟೆ ಸಹಕಾರ ಸಂಘ ಶಿವಮೊಗ್ಗ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಕಟ್ಟಡದ ಗುತ್ತಿಗೆದಾರ ಪುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಪೇಕಟ್ಟೆ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ.ರಮೇಶ, ಸಿಇಒ ಪ್ರಸನ್ನ, ಉಪಾಧ್ಯಕ್ಷ ಎಚ್.ಕೆ.ನಾರಾಯಣ, ಸಾಗರ ಆಪ್ಸ್‌ಕೋಸ್ ಅಧ್ಯಕ್ಷ ಇಂದೂಧರ ಗೌಡ, ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ ಇತರರಿದ್ದರು.