ಭದ್ರಾವತಿ ತಾಲೂಕಿನ ನಾಗಸಮುದ್ರದ ಹುತಾತ್ಮ ರೈತರ ಸ್ಮಾರಕದ ಬಳಿ ರೈತ ಸಂದಿಂದ ರೈತ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಎಚ್.ಆರ್.ಬಸವರಾಜಪ್ಪ, ಟಿ.ಎಂ.ಚಂದ್ರಪ್ಪ, ಭಾಗ್ಯಾ ರಾವೇಂದ್ರ ಇತರರಿದ್ದರು.
- ನಾಗಸಮುದ್ರ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆ
- 1982ರ ಮೇ 25ರಂದು ನಾಗಸಮುದ್ರದಲ್ಲಿ ನಡೆದಿದ್ದ ಗೋಲಿಬಾರ್
ಹೊಳೆಹೊನ್ನೂರು: ರೈತರ ಹಕ್ಕುಗಳಿಗಾಗಿ ನಡೆದ ಹೋರಾಟಗಳು ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿವೆ ಎಂದು ರೈತ ಸಂದ ರಾಜ್ಯಾಧ್ಯ ಎಚ್.ಆರ್.ಬಸವರಾಜಪ್ಪ ಹೇಳಿದರು.
ನಾಗಸಮುದ್ರ ಗ್ರಾಮದಲ್ಲಿ ಸೋಮವಾರ ಹುತಾತ್ಮ ರೈತರ ಸ್ಮಾರಕದ ಬಳಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 44ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.
ನಾಗಸಮುದ್ರ ಗೋಲಿಬಾರ್ ಕೇವಲ ಒಂದು ಟನೆ ಅಲ್ಲ, ಅದು ರೈತರ ಹಕ್ಕು ಹಾಗೂ ಅಸ್ತಿತ್ವಕ್ಕಾಗಿ ನಡೆದ ತ್ಯಾಗದ ಸಂಕೇತ. 1982 ಮೇ 25ರಂದು ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಸನ್ಯಾಸಿಕೊಡಮಗ್ಗಿ ಬಸವನಗೌಡ, ನಾಗಸಮುದ್ರದ ಮಲ್ಲಪ್ಪ, ಬಾಲಕ ನಟರಾಜ ಎಂಬ ಮೂರು ಜನ ಪೊಲೀಸರ ಗುಂಡಿಗೆ ಹುತಾತ್ಮರಾದರು. ನಾಗಸಮುದ್ರ ಮಾತ್ರವಲ್ಲದೆ ರಾಜ್ಯಾದ್ಯಂತ ನಡೆದ ಗೋಲಿಬಾರ್ ಟನೆಗಳಲ್ಲಿ 156 ಜನ ಹುತಾತ್ಮರಾಗಿದ್ದಾರೆ. ಅವರೆಲ್ಲರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರವಾಗಬೇಕು ಎಂದರು.
ಹೊಳೆಹೊನ್ನೂರು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಿಂದಾದ ಹಾನಿ ಬಗ್ಗೆ ಅಧಿಕಾರಿಗಳು ಸಮೀೆ ಮಾಡಿ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ಹೊಳೆಹೊನ್ನೂರು, ಕೂಡ್ಲಿಗೆರೆ, ಹೊಳಲೂರು ಹೋಬಳಿಯ ಸುಮಾರು ಹಳ್ಳಿಗಳಲ್ಲಿ ನಂತರ ಬಿದ್ದ ಮಳೆ, ಬಿರುಗಾಳಿಗೆ ಅಲ್ಲಿಯೂ ಅಡಿಕೆ, ತೆಂಗು, ಬಾಳೆ, ಮನೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಉಳಿದ ಹಳ್ಳಿಗಳಲ್ಲಿ ಕೂಡಲೇ ಸಮೀೆ ಕಾರ್ಯ ಮಾಡಬೇಕೆಂದು ಒತ್ತಾಯಿಸಿದರು.
ಈಗಿನ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ ಪ್ರಕಾರ ಒಂದು ಅಡಿಕೆ, ತೆಂಗಿನ ಮರಕ್ಕೆ 16ರೂ. ಬಾಳೆ, ಮಾವು, ಮನೆ ಹಾನಿಗೂ ಬಹಳ ಕಡಿಮೆ ಪರಿಹಾರ ಸಿಗುತ್ತದೆ. ಇದು ಸಂತ್ರಸ್ತರಿಗೆ ಕೊಡುವ ಭಿೆ ಎಂಬಂತಾಗಿದೆ. ಆದ್ದರಿಂದ ಈ ಟನೆಯನ್ನು ವಿಶೇಷ ಪ್ರಕರಣವೆಂದು ತೀರ್ಮಾನಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕನಿಷ್ಠ ಎಕರೆಗೆ 1 ಲಕ್ಷ ರೂ., ಮನೆ ಹಾನಿಗೆ ಹಿಂದಿನಂತೆ 5 ಲಕ್ಷ ರೂ. ಕೊಡಬೇಕು. ಈಗಿರುವ ಮಾರ್ಗಸೂಚಿಯನ್ನು ಕನಿಷ್ಠ 20ಪಟ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳ ಪ್ರಕಾರ ಅಡಿಕೆ ಹಾಗೂ ತೆಂಗಿನ ಮರಗಳಿಗೆ ಕೇವಲ ಅಲ್ಪ ಪ್ರಮಾಣದ ಪರಿಹಾರ ಮಾತ್ರ ನೀಡಲಾಗುತ್ತಿದೆ. ಬಾಳೆ, ಮಾವು ಹಾಗೂ ಮನೆಹಾನಿಗೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ರೈತರು ವರ್ಷಪೂರ್ತಿ ದುಡಿದು ಬೆಳೆ ಬೆಳೆಸುತ್ತಾರೆ. ಆದರೆ ಪ್ರಕೃತಿ ವಿಕೋಪದಿಂದ ಎಲ್ಲವನ್ನೂ ಕಳೆದುಕೊಂಡಾಗ ಸಿಗುತ್ತಿರುವ ಪರಿಹಾರ ಮೊತ್ತ ತುಂಬ ಕಡಿಮೆ ಎಂದರು.
ರೈತ ಸಂದ ರಾಜ್ಯ ಉಪಾಧ್ಯ ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಮಹಿಳಾ ಸಂಚಾಲಕಿ ಭಾಗ್ಯ ರಾವೇಂದ್ರ, ಜಿಲ್ಲಾಧ್ಯ ಕೆ. ರಾವೇಂದ್ರ, ಪಿ.ಶೇಖರಪ್ಪ, ಡಿ.ಎಸ್.ಜಯಣ್ಣ, ಎಂ.ಡಿ.ನಾಗರಾಜ್, ಸಿ.ಚಂದ್ರಪ್ಪ, ಜಿ.ಎನ್.ಪಂಚಾಕ್ಷರಿ, ಸಿ.ಬಿ.ಹನುಮಂತಪ್ಪ, ಮಂಜಪ್ಪ, ನಾಗರಾಜ್, ಭೋಜರಾಜ್, ಜಗನಾಥ್, ರವಿ ಇತರರಿದ್ದರು.