ಪಾಠಶಾಲಾ ಸಿನಿಮಾ ನಿರ್ದೇಶಕ ಹೆದ್ದೂರು ಮಂಜುನಾಥ ಮಾತನಾಡಿದರು. 
ಶಿವಮೊಗ್ಗ

ಮಲೆನಾಡ ಸೊಗಡಿನ ಪಾಠಶಾಲಾ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ | Movie

ಶಿವಮೊಗ್ಗ: ತೀರ್ಥಹಳ್ಳಿಯ ಎಂಎಸ್ ಸ್ಕ್ವೇರ್ ಮೂವೀಸ್ ಯು ಫ್ರೆಂಡ್ಸ್ ಬ್ಯಾನರ್ ಅಡಿ ಮೂಡಿಬಂದಿರುವ ಮಲೆನಾಡ ಸೊಗಡಿನ ಪಾಠಶಾಲಾ ಸಿನಿಮಾ(Movie)ರಾಜ್ಯಾದ್ಯಂತ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ನಿರ್ದೇಶಕ ಹೆದ್ದೂರು ಮಂಜುನಾಥ ಹೇಳಿದರು.
ನ.28ರಂದು ರಾಜ್ಯಾದ್ಯಂತ ಪಾಠಶಾಲಾ(patashaala)ಚಿತ್ರ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಹುತೇಕ ಮಲೆನಾಡಿನ ಕಲಾವಿದರೇ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
80-90ರ ದಶಕದಲ್ಲಿ ಮಲೆನಾಡಿನ ಭಾಗದಲ್ಲಿ ನಡೆದ ನೈಜ ಕಥೆ(real story) ಆಧರಿಸಿ ಸಿನಿಮಾ ಮಾಡಲಾಗಿದೆ. 1.75 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದೇವೆ. 28 ದಿನ ಶೂಟಿಂಗ್‌ನಲ್ಲಿ ಯಾವುದೇ ವಿಎಫ್‌ಎಕ್ಸ್ ಬಳಸಲಿಲ್ಲ. ಮಳೆ, ಬಿಸಿಲು ಸೇರಿ ಎಲ್ಲವನ್ನೂ ಸ್ವಾಭಾವಿಕವಾಗಿ ಚಿತ್ರಿಸಲಾಗಿದೆ ಎಂದು ಹೇಳಿದರು.
ನಟ ಕೇಶವ್ ಮಾತನಾಡಿ, ತಾವು ಈ ಚಿತ್ರದಲ್ಲಿ ವಾಚರ್ ಶಿವಣ್ಣ ಎಂಬ ಕಾಮಿಡಿಯನ್ ಪಾತ್ರ ಮಾಡಿದ್ದೇನೆ. ಇತ್ತೀಚೆಗೆ ಮಲೆನಾಡಿನ ಸೊಗಡು ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಚಿತ್ರದ ಮೂಲಕ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ಅಂಟಿಕೆ-ಪಿಂಟಿಗೆ ಸೇರಿದಂತೆ ಅನೇಕ ವಿಚಾರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕ್ಲೈಮ್ಯಾಕ್ಸ್ ಉತ್ತಮವಾಗಿದೆ ಎಂದರು.
ಪ್ರಮುಖರಾದ ವಿನಯ್ ಕಣಿವೆ, ಪ್ರೀತಿ ಮಂಜುನಾಥ, ರಮೇಶ್ ಶೆಟ್ಟಿ, ಶಶಿಕುಮಾರ್, ಕುರುವಳ್ಳಿ ನಾಗ, ಎಸ್.ಮೂರ್ತಿ, ಶಿವಶಂಕರ್, ದಿಗಂತ್, ರಘು ಗುಂಡ್ಲು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.