ಸೊರಬದ ಕಮರೂರು ಶ್ರೀ ಸತ್ಯಸಾಯಿ ಸರ್ವನಿಕೇತನ ಗುರುಕುಲದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನವನ್ನು ಪ್ರಧಾನ ಪಾಲಕ ಶಿವಪ್ರಸಾದ್ ಉದ್ಘಾಟಿಸಿದರು. ಆರ್.ಎಲ್.ಸಂತೋಷ್, ನಂದಾ ಪ್ರೇಮಕುಮಾರ್, ನಿರಂಜನ್‌ಕುಮಾರ್ ಇತರರಿದ್ದರು. 
ಶಿವಮೊಗ್ಗ

ಉತ್ತಮ ಪರಿಸರದಿಂದ ಸದೃಢ ಆರೋಗ್ಯ

ಸೋಮಶೇಖರ ಎನ್
ಸೊರಬ: ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಣೆ ಮಾಡಲು ಮುಂದಾಗಬೇಕು ಎಂದು ಕಮರೂರು ಶ್ರೀ ಸತ್ಯಸಾಯಿ ಸರ್ವನಿಕೇತನ ಗುರುಕುಲದ ಪ್ರಧಾನ ಪಾಲಕ ಶಿವಪ್ರಸಾದ್ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಹೋಬಳಿಯ ಕಮರೂರು ಶ್ರೀ ಸತ್ಯಸಾಯಿ ಸರ್ವನಿಕೇತನ ಗುರುಕುಲದಲ್ಲಿ ಶಿವಮೊಗ್ಗ ಸಿರಿಗನ್ನಡ ಮಹಿಳಾ ವೇದಿಕೆಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಳೆಗಾಲ ಪ್ರಾರಂಭವಾಗಿದ್ದು, ಪರಿಸರಕ್ಕೆ ಹೊಸ ಜೀವ ತುಂಬುತ್ತಿದೆ. ಉತ್ತಮ ಪರಿಸರ ಇದ್ದರೆ ಎಲ್ಲರೂ ಆರೋಗ್ಯದಿಂದ ಸುಂದರ ಬದುಕು ಕಟ್ಟಿಕೊಳ್ಳಲು ಸಹಕಾರಿ ಎಂದರು.
ಪರಿಸರ ಕುರಿತ ಕಾರ್ಯಾಗಾರ, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗುರುಕುಲದ ವಿದ್ಯಾರ್ಥಿಗಳ ಸಮೂಹ ವೇದಘೋಷ ನಡೆಸಿಕೊಟ್ಟಿತು. ಕವಿಗೋಷ್ಠಿಯಲ್ಲಿ ಕವಿ ಪ್ರಶಾಂತ್ ಪರಿಸರ ಕುರಿತು ಕವನ ವಾಚಿಸಿದರು.
ಗುರುಕುಲದ ಮುಖ್ಯಶಿಕ್ಷಕ ಆರ್.ಎಲ್.ಸಂತೋಷ್, ಸಲಹಾ ಸಮಿತಿ ಸದಸ್ಯ ಹೊಸತೋಟ ಸೂರ್ಯನಾರಾಯಣ, ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ನಿರಂಜನ್‌ಕುಮಾರ್, ಜಿಲ್ಲಾ ಮಹಿಳಾ ಸಿರಿಗನ್ನಡ ವೇದಿಕೆ ಅಧ್ಯಕ್ಷೆ ನಂದಾ ಪ್ರೇಮಕುಮಾರ್, ನಳಿನಾ, ಚಂದ್ರಕುಮಾರ, ರಂಗನಾಥ್, ಮಧುರಾ ಭಟ್ ಇತರರಿದ್ದರು.