ಭದ್ರಾವತಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರನ್ನು ವಕೀಲರ ಸಂಘದಿಂದ ಸನ್ಮಾನಿಸಲಾಯಿತು. ನ್ಯಾಯಾಧೀಶ ರವಿಕುಮಾರ್, ಬಿ.ಸಿ.ಕೇಶವಮೂರ್ತಿ, ಚಂದ್ರೇಗೌಡ, ಶಿವಕುಮಾರ್ ಇತರರಿದ್ದರು. 
ಶಿವಮೊಗ್ಗ

ಎಲ್ಲರ ಸಹಕಾರಿಂದ ಉತ್ತಮ ಕಾರ್ಯನಿರ್ವಹಣೆ | Judge transfer

ಶಿವಕುಮಾರ ಎಸ್.ಪಿ.
ಭದ್ರಾವತಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾನು ಭದ್ರಾವತಿಯಲ್ಲಿ ನ್ಯಾಯಾಧೀಶೆಯಾಗಿ ನನ್ನ ಕರ್ತವ್ಯದಲ್ಲಿ ಉತ್ತಮವಾಗಿ ತೀರ್ಪು ನೀಡಲು ಸಾಧ್ಯವಾಗಿದ್ದರೆ ಅದಕ್ಕೆ ಭದ್ರಾವತಿ ವಕೀಲರ ಹಾಗೂ ನನ್ನ ನ್ಯಾಯಾಲಯದ ಸಿಬ್ಬಂದಿಯ ಜವಾಬ್ದಾರಿಯುತ ಕಾರ್ಯನಿರ್ವಹಣೆ ಕಾರಣ ಎಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಹೇಳಿದರು.
ಭದ್ರಾವತಿ ವಕೀಲರ ಸಂಘದಿಂದ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಗರದ ವಕೀಲರು ಸ್ನೇಹಮಯಿ ವ್ಯಕ್ತಿತ್ವದವರು. ನಾನು ಸಹ ಇಲ್ಲಿನ ವಕೀಲರನ್ನು ನನ್ನ ಕುಟುಂಬದ ಸದಸ್ಯರಂತೆ ಭಾವಿಸಿದ್ದೇನೆ ಎಂದರು.
ಕಿರಿಯ ವಕೀಲರಿಗೆ ಇಲ್ಲಿನ ಹಿರಿಯ ವಕೀಲರು ಪ್ರಕರಣ ನಡೆಸಲು ಬಹಳಷ್ಟು ಮುಕ್ತ ಅವಕಾಶ ನೀಡಿದ್ದಾರೆ. ಅದನ್ನು ಕಿರಿಯ ವಕೀ ಲರು ಸದ್ಬಳಕೆ ಮಾಡಿಕೊಳ್ಳಬೇಕು. ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು. ಸಣ್ಣ, ದೊಡ್ಡ ಪ್ರಕರಣ ಎಂದು ತಾರತಮ್ಯವಿಲ್ಲದೆ ಎಲ್ಲ ಪ್ರಕರಣಗಳನ್ನೂ ಸಹ ಆಸಕ್ತಿ, ಶ್ರದ್ಧೆಯಿಂದ ನಡೆಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಕೇಶವಮೂರ್ತಿ ಮಾತನಾಡಿ, ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಕರ್ತವ್ಯದಲ್ಲಿ ಹೆಚ್ಚು ಸಮಯ ಕಳೆಯುವ ಮನೋಭಾವದವರು. ಅದು ಎಲ್ಲರಿಗೂ ಅನುಕರಣೀಯವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಎಂಎ್ಸಿ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ರಾಜು, ವಕೀಲರಾದ ಚಂದ್ರೇಗೌಡ, ಶಿವಕುಮಾರ್ ಉಪಸ್ಥಿತರಿದ್ದರು.