ಆನವಟ್ಟಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸತಿಕ ಕಾರ್ಯಕ್ರಮ ಸಮಾರೋಪದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಧು ಬಂಗಾರಪ್ಪ, ಆರ್.ಸಿ.ಭೀಮಪ್ಪ, ಎಚ್.ಸಿ.ಮಧುಕೇಶ್ವರ ಪಾಟೀಲ್ ಇತರರಿದ್ದರು.
- ಕ್ರೀಡೆ, ಎನ್ಎಸ್ಎಸ್, ಸಮಾರೋಪ
- ಸಚಿವ ಮಧು ಬಂಗಾರಪ್ಪ ಹೇಳಿಕೆ
- ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ
ಆನವಟ್ಟಿ: ಶಿಣ ಮೊದಲ ಆದ್ಯತೆಯಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯುತ್ತಿರುವುದು ಶಿಕ್ಷಣ ಕ್ಷೇತ್ರದಲ್ಲಾದ ಉತ್ತಮ ಬೆಳವಣಿಗೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಆನವಟ್ಟಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2025&26ನೇ ಸಾಲಿನ ಸಾಂಸತಿಕ, ಕ್ರೀಡೆ, ಎನ್ಎಸ್ಎಸ್, ರೆಡ್ಕ್ರಾಸ್, ರೇಂಜರ್ಸ್, ರೋವರ್ಸ್ ಟಕಗಳ ಸಮಾರೋಪದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ನುರಿತ ಹಾಗೂ ವಿದ್ಯಾವಂತ ಶಿಕರು ನೇಮಕಗೊಂಡಿದ್ದು, ಮಕ್ಕಳಿಗೆ ಉತ್ತಮ ಶಿಣ ದೊರೆಯುತ್ತದೆ. ರಾಜ್ಯ ಸರ್ಕಾರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ, ಮೊಟ್ಟೆ, ಹಾಲು ನೀಡುತ್ತಿದೆ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಕೆ.ಎಸ್.ಐಶ್ವರ್ಯಾ(1ನೇ ರ್ಯಾಂಕ್), ಐಶ್ವರ್ಯಾ ಆಲೂರು(3ನೇ ರ್ಯಾಂಕ್), ಎಸ್.ಎಂ.ಸ್ವಪ್ನಾ(5ನೇ ರ್ಯಾಂಕ್) ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಆರ್.ಸಿ.ಭೀಮಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯ ಎಚ್.ಸಿ.ಮಧುಕೇಶ್ವರ ಪಾಟೀಲ್, ತಹಸೀಲ್ದಾರ್ ಕೆ.ಪುರಂದರ, ಇಒ ಶಶಿಧರ್, ಬಿಇಒ ಪುಷ್ಪಾ, ಸದಾನಂದ ಗೌಡ, ಕೆ.ಪಿ.ರುದ್ರಗೌಡ, ಅಂಜಲಿ ಸಂಜೀವ್ ಇತರರಿದ್ದರು.