ಎಸ್‌ಐಆರ್ ಪ್ರಕ್ರಿಯೆಗೆ ನಿಯೋಜನೆಗೊಂಡ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಗೌರವಧನ ನೀಡಬೇಕೆಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಚಂದ್ರಕಲಾ, ರಾಜೇಶ್ವರಿ, ರೇಣುಕಾ, ಮಾಲತಿ, ಸರಸ್ವತಿ ಇದ್ದರು. 
ಶಿವಮೊಗ್ಗ

ಬಿಎಲ್‌ಒ ಸಹಾಯಕರಿಗೆ ಗೌರವಧನ ಕೊಡಿ I blo asistants

ಪ್ರಮುಖ ಮುಖ್ಯಾಂಶಗಳು

  • ಕನಿಷ್ಠ ಐದು ಸಾವಿರ ರೂ. ಪಾವತಿಸಬೇಕು
  • ಡಿಸಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಶಿವಮೊಗ್ಗ: ಎಸ್‌ಐಆರ್ (sir) ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿ (blo) ಗೆ ಸಹಾಯಕರನ್ನಾಗಿ ನೇಮಿಸಿದ ಆಶಾ (asha) ಕಾರ್ಯಕರ್ತೆಯರಿಗೆ ಗೌರವಧನ ನೀಡಬೇಕೆಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾಗರ ಮತ್ತು ಭದ್ರಾವತಿ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಬಿಎಲ್‌ಒಗಳಿಗೆ ಸಹಾಯಕರನ್ನಾಗಿ ನೇಮಿಸಲಾಗಿದೆ. ನಿಯೋಜನೆ ಸಂದರ್ಭದಲ್ಲಿ ಅವರಿಗೆ ನೀಡುವ ಗೌರವಧನದ ಬಗ್ಗೆ ಸ್ಪಷ್ಟ ವಿವರಣೆಯಿಲ್ಲ. ಪ್ರಸ್ತುತ ಆಶಾ ಕಾರ್ಯಕರ್ತೆಯರು ಕಡಿಮೆ ಗೌರವಧನಕ್ಕೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಈಗ ಮತ್ತೆ ಹೆಚ್ಚುವರಿ ಕೆಲಸ ನೀಡಲಾಗಿದೆ. ಹೀಗಾಗಿ ಕನಿಷ್ಠ ಐದು ಸಾವಿರ ರೂ. ಗೌರವಧನ ನೀಡಬೇಕೆಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸಬಾರದು. ಒಂದು ವೇಳೆ ನಿಯೋಜಿಸಿದಲ್ಲಿ ಹೆಚ್ಚುವರಿ ಗೌರವಧನ ನೀಡಬೇಕು. ಈಗಾಗಲೇ ಆಶಾ ಕಾರ್ಯಕರ್ತೆಯರು ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಕೆಲಸಗಳ ಜತೆಗೆ ಇದು ಹೆಚ್ಚುವರಿ ಕೆಲಸವಾಗುತ್ತದೆ. ಇದರಿಂದ ಸಾರ್ವಜನಿಕ ಆರೋಗ್ಯ ಸೇವೆಗಳು ಸಂಪೂರ್ಣ ಕುಂಠಿತಗೊಳ್ಳುತ್ತವೆ ಎಂದು ಅಲವತ್ತುಕೊಂಡರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಪ್ರಮುಖರಾದ ಸರಸ್ವತಿ, ರೇಣುಕಾ, ಮಾಲತಿ, ನಾಗರತ್ನಾ, ಆಶಾ ಇತರರಿದ್ದರು.