- ಲಕ್ಕಿನಕೊಪ್ಪದ ಚಿಕ್ಕಮ್ಮನ ಮನೆಗೆ ತೆರಳಿದ್ದ ಪ್ರಣಮ್ಯ
- ಶಿವಮೊಗ್ಗ ವಿದ್ಯಾನಗರದ ಪ್ರಣಮ್ಯ ಮೃತ ಬಾಲಕಿ
- ಶಿವಮೊಗ್ಗ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ಬೇಸಿಗೆ ರಜೆ ಹಿನ್ನಲೆಯಲ್ಲಿ ನಗರದ ಹೊರವಲಯದ ಲಕ್ಕಿನಕೊಪ್ಪ(Lakkinakoppa)ದ ಚಿಕ್ಕಮ್ಮನ ಮನೆಗೆ ತೆರಳಿದ್ದ ಬಾಲಕಿಯೊಬ್ಬಳು ಜೋಕಾಲಿ(Jokali) ಆಡುವಾಗ ಪಂಚೆ ಕುತ್ತಿಗೆಗೆ ಬಿಗಿದು ಮೃತಪಟ್ಟಿದ್ದಾಳೆ.
ಶಿವಮೊಗ್ಗ ವಿದ್ಯಾನಗರದ ಪ್ರಣಮ್ಯ (9) ಮೃತ ಬಾಲಕಿ. ಈಕೆ ಬೇಸಿಗೆ ರಜೆ(Summer vacation)ಗಾಗಿ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಪಂಚೆಯಲ್ಲಿ ಜೋಕಾಲಿ ಕಟ್ಟಿ ಆಟವಾಡುತ್ತಿದ್ದಳು. ಈ ವೇಳೆ ಕುತ್ತಿಗೆಗೆ ಬಿಗಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಹಳ ಹೊತ್ತಾದರೂ ಬಾಲಕಿ ಧ್ವನಿ ಕೇಳದ ಹಿನ್ನಲೆಯಲ್ಲಿ ಚಿಕ್ಕಮ್ಮ ಸ್ಥಳಕ್ಕೆ ತೆರಳಿ ನೋಡಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.