ಸೊರಬದಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಡಾ. ಎಚ್.ಇ.ಜ್ಞಾನೇಶ್, ಬಿ.ಎಂ.ಭಟ್, ಎಚ್.ಎಸ್.ನಾಗರಾಜ, ಎಚ್.ಇ.ಮಾಲತೇಶ ಇತರರಿದ್ದರು.
ಸೊರಬ: ಕಷ್ಟದಲ್ಲಿ ಇರುವವರಿಗೆ ಅಗತ್ಯ ನೆರವು ನೀಡಲು ರೋಟರಿ ಸದಸ್ಯರು ಮುಂದಾಗಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಪ್ರತಿಯೊಂದು ಕ್ಲಬ್ ಸುಸ್ಥಿರ ಬೆಳವಣಿಗೆಗೆ ಮುಂದಾಗುವುದರ ಜತೆಗೆ ಹೊಸ ಸದಸ್ಯರ ಸಂಖ್ಯೆ ವೃದ್ಧಿಸಿಕೊಳ್ಳಬೇಕು. ಹಳೆಯ ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ರೋಟರಿ ಸದಸ್ಯರು ಸಮಾಜಮುಖಿ ಕಾರ್ಯಗಳ ಮೂಲಕ ಅರ್ಹರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದರು.
ಜಿಲ್ಲಾ ಉಪ ಗವರ್ನರ್ ಎಚ್.ಎಸ್.ನಾಗರಾಜ ಮಾತನಾಡಿ, ರೋಟರಿ ಗ್ಲೋಬಲ್ ಗ್ರಾೃಂಟ್ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಸೇವಾ ಚಟುವಟಿಕೆಗಳನ್ನು ನಡೆಸಬೇಕು. ಸಂಕಷ್ಟದಲ್ಲಿ ಇರುವವರ ನೆರವಿಗೆ ಮುಂದಾಗಬೇಕು ಎಂದು ಹೇಳಿದರು.
ಸಾಹಿತಿ ಡಾ. ಅಜಿತ್ ಹೆಗಡೆ ಹರೀಶಿ, ಹಸೆ ಚಿತ್ತಾರ ಕಲಾವಿದ ವಿಶ್ವನಾಥ ಹೆಚ್ಚೆ, ಆಕಾಶವಾಣಿ ಕಲಾವಿದ ಗುರುಮೂರ್ತಿ, ಜಗದೀಶ್, ಪ್ರಗತಿಪರ ಕೃಷಿಕ ಚನ್ನಬಸಪ್ಪ ತೊರವಂದ, ಚಾಲಕ ಎಸ್.ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷ ಎಚ್.ಇ.ಮಾಲತೇಶ್, ಕಾರ್ಯದರ್ಶಿ ಪ್ರಕಾಶ ಜಿ.ಬಿಳವಗೋಡು, ಜೋನಲ್ ಲೆಫ್ಟಿನೆಂಟ್ ಕೆ.ಬಿ.ಕೃಷ್ಣಪ್ಪ ಓಟೂರು, ನಿಕಟಪೂರ್ವ ಅಧ್ಯಕ್ಷ ಜೆ.ಎಸ್.ಮಹಾಂತೇಶ್, ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್.ಇ.ಜ್ಞಾನೇಶ್, ಯಶೋಧರ, ನಿರಂಜನ ಕುಪ್ಪಗಡ್ಡೆ, ಡಾ. ನಾಗರಾಜ, ನಾಗರಾಜ ಗುತ್ತಿ, ಪುರುಷೋತ್ತಮ್ ಕುಪ್ಪಗಡ್ಡೆ, ಡಾ. ನವೀನ್ ಇತರರಿದ್ದರು.