ಶಿವಮೊಗ್ಗ ಗಾಂಧಿ ಪಾರ್ಕ್‌ನಲ್ಲಿ ನಿರ್ಮಾಣಗೊಂಡಿರುವ ಕಾಡುಕೋಣದ ಕಲಾಕೃತಿಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ವೀಕ್ಷಿಸಿದರು. ಉಪ ಆಯುಕ್ತ ತುಷಾರ್ ಹೊಸೂರು ಇತರರಿದ್ದರು. 
ಶಿವಮೊಗ್ಗ

ಇನ್ಮುಂದೆ ಪಾಲಿಕೆಯಿಂದಲೇ ಗಾಂಧಿ ಪಾರ್ಕ್ ನಿರ್ವಹಣೆ । Gandhi Park

ಪ್ರಮುಖ ಮುಖ್ಯಾಂಶಗಳು

  • 1.08 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ
  • ಭದ್ರತಾ ದೃಷ್ಟಿಯಿಂದ 32 ಸಿಸಿ ಕ್ಯಾಮರಾ ಅಳವಡಿಕೆ
  • ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ
ಶಿವಮೊಗ್ಗ: ನಗರದ ಮಹಾತ್ಮ ಗಾಂಧಿ ಪಾರ್ಕ್‌ (Gandhi Park)ಅನ್ನು ಮಹಾನಗರ ಪಾಲಿಕೆಯೇ ಇನ್ಮುಂದೆ ನಿರ್ವಹಣೆ(Management) ಮಾಡಲಿದ್ದು, ಭದ್ರತಾ ದೃಷ್ಟಿಯಿಂದ 32 ಸಿಸಿ ಕ್ಯಾಮರಾ(CCTV camera) ಅಳವಡಿಕೆ ಮಾಡಲಾಗಿದೆ. 14 ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಪಾರ್ಕ್‌ನಲ್ಲಿ ಈಗಾಗಲೇ 1.08 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ(Development work)ಗಳಿಗೆ ಚಾಲನೆ ನೀಡಿದ್ದು, ಇನ್ನೊಂದು ತಿಂಗಳಲ್ಲಿ ಪಾರ್ಕ್‌ ಅನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರಸಭೆಯಿಂದ ನಿರ್ವಹಣೆಗೆ ಹರಾಜು ಪ್ರಕ್ರಿಯೆ(Auction process) ನಡೆಸಿದ ಸಂದರ್ಭದಲ್ಲಿ ಉಂಟಾದ ಗೊಂದಲ ಸೃಷ್ಟಿಯಾಗಿತ್ತು. ಪಾರ್ಕ್ ಅಭಿವೃದ್ಧಿಗೊಂಡಾಗ ಶಿವಮೊಗ್ಗ ಇನ್ನೂ ನಗರಸಭೆಯಾಗಿತ್ತು. ಅಂದು ಪಾರ್ಕ್ ನಿರ್ವಹಣೆ ಕಷ್ಟಕರವಾಗುತ್ತಿತ್ತು. ಪಾಲಿಕೆ ಆದ ಮೇಲೆ ನಿರ್ವಹಣೆ ಮಾಡಲು ತೀರ್ಮಾನಿಸಿ ನಂತರ ಹಣ ಬಿಡುಗಡೆ ಮಾಡಲಾಗಿತ್ತು. ಟೆಂಡರ್(Tender) ಕೂಡ ಕರೆಯಲಾಗುತ್ತಿತ್ತು. ಆದರೂ ಸಮಸ್ಯೆಯಾಗುತ್ತಿತ್ತು. ಇದೀಗ ಪಾಲಿಕೆಯೇ ಪಾರ್ಕ್ ನಿರ್ವಹಣೆ ಮಾಡಲಿದೆ ಎಂದರು.
ಈಗಾಗಲೇ ಆಟದ ಉಪಕರಣಗಳನ್ನು ದುರಸ್ತಿ ಮಾಡಿದ್ದು, ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಲಾಗಿದೆ. ಹಸಿರೀಕರಣಕ್ಕಾಗಿ ತುಂತುರು ನೀರಾವರಿ ವ್ಯವಸ್ಥೆ ಜಾರಿಗೊಳಿಸಿ, ಸಸಿಗಳಿಗೆ ನಿಯಮಿತವಾಗಿ ನೀರು ಒದಗಿಸಲಾಗುತ್ತಿದೆ. ಒಳಚರಂಡಿ(Ugd) ನೀರಿನಿಂದ ವಾಸನೆ ಬರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ. ಪ್ರತಿ ವಾರಾಂತ್ಯದಲ್ಲಿ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ವನ್ಯಜೀವಿ ಮಾಹಿತಿ ಕೇಂದ್ರ: ಸ್ಮಾರ್ಟ್ ಸಿಟಿ(Smartcity)ಯಿಂದ ಪಾರ್ಕ್‌ನಲ್ಲಿ ವನ್ಯಜೀವಿ ಮಾಹಿತಿ ಹಾಗೂ ವಿವರಣೆ ಕೇಂದ್ರವನ್ನು ಸ್ಥಾಪಿಸಿ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದೆ. ಮಕ್ಕಳಲ್ಲಿ ಪರಿಸರ ಮತ್ತು ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ರೂಪಿಸಲಾಗಿದೆ. ಕಾಮಗಾರಿಗಳ ಮೇಲ್ವಿಚಾರಣೆಗೆ ಉಪ ಆಯುಕ್ತರು ಮತ್ತು ಕಾರ್ಯಪಾಲಕ ಅಭಿಯಂತ ಸೇರಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದರು.
ಪ್ರವೇಶ ಶುಲ್ಕ ನಿಗದಿ: ಪಾರ್ಕ್‌ಗೆ ಪ್ರವೇಶ ಶುಲ್ಕ(Entrance fee) ನಿಗದಿಪಡಿಸಲಾಗಿದೆ. ವಯಸ್ಕರಿಗೆ 10 ರೂ., ಮಕ್ಕಳಿಗೆ  5 ರೂ. ಇರಲಿದೆ. ವನ್ಯಜೀವಿ ಕೇಂದ್ರ ಪ್ರವೇಶ ಹಾಗೂ ಚಿನ್ನಾರಿ ರೈಲು ಸಂಚಾರಕ್ಕೆ ವಯಸ್ಕರಿಗೆ ತಲಾ 20 ರೂ., ಮಕ್ಕಳಿಗೆ ತಲಾ 10 ರೂ. ಇರಲಿದೆ. ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ ಇರಲಿದೆ. ವಾಯುವಿಹಾರಕ್ಕೆ ಬರುವವರಿಗೆ ಉಚಿತ ಪ್ರವೇಶವಿದೆ. ಕ್ಯಾಂಟೀನ್ ಕೂಡ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಉಪ ಆಯುಕ್ತ ತುಷಾರ್ ಹೊಸೂರು, ಕಾರ್ಯಪಾಲಕ ಅಭಿಯಂತರರಾದ ಲಕ್ಷ್ಮೀಪ್ರಿಯಾ, ಜ್ಯೋತಿ ಸುದ್ದಿಗೋಷ್ಠಿಯಲ್ಲಿದ್ದರು.

ಯಾವುದಕ್ಕೆ ಎಷ್ಟು ವೆಚ್ಚ ?

  1. ಬೋರ್‌ವೆಲ್ ಕೊರೆಸಲು 13 ಲಕ್ಷ ರೂ.
  2. ಶೌಚಗೃಹ ನಿರ್ಮಾಣಕ್ಕೆ 6.30 ಲಕ್ಷ ರೂ.
  3. ಉಪಕರಣಗಳಿಗೆ 42.48 ಲಕ್ಷ ರೂ.
  4.  ಆಟಿಕೆ ಮತ್ತು ರೈಲು ಮರುನಿರ್ಮಾಣಕ್ಕೆ 9.70 ಲಕ್ಷ ರೂ.
  5. ಕುಟೀರ ನಿರ್ಮಾಣಕ್ಕೆ 13.10 ಲಕ್ಷ ರೂ.
  6. ಟೈಲ್ಸ್ ಮತ್ತಿತರ ಕಾಮಗಾರಿಗೆ 2 ಲಕ್ಷ ರೂ.
  7. ಹನಿ ನೀರಾವರಿ ವ್ಯವಸ್ಥೆಗೆ 30 ಲಕ್ಷ ರೂ.
"

ಶಿವಮೊಗ್ಗದ ಗಾಂಧಿ ಪಾರ್ಕ್ ಹಳೆಯದ್ದಾಗಿದ್ದು, 70ರಿಂದ 80 ದಶಕದಲ್ಲಿ ಪ್ರತಿ ಭಾನುವಾರ ಸಿನಿಮಾ ಗೀತೆಗಳು ಮತ್ತು ಸಿನಿಮಾಗಳ ಪ್ರದರ್ಶನ ನಡೆಯುತ್ತಿತ್ತು. ಆಗ ವಾಸವಿ ಯುವಕರ ಸಂಘ ಪಾರ್ಕ್ ನಿರ್ವಹಣೆ ಮಾಡುತ್ತಿತ್ತು. 2008ರ ನಂತರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆಸಕ್ತಿ ವಹಿಸಿದ ಪರಿಣಾಮ ಗಾಂಧಿ ಪಾರ್ಕ್ ಅಭಿವೃದ್ಧಿಯಾಗಿತ್ತು.