ಶಿವಮೊಗ್ಗ ಸೈಬರ್ ಠಾಣೆ 
ಶಿವಮೊಗ್ಗ

ಕೆಲಸ ಕೊಡಿಸುವುದಾಗಿ ನಾಲ್ವರಿಗೆ 5 ಲಕ್ಷ ರೂ. ವಂಚನೆ | Online Fraud

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಅಪರಿಚಿತರು
  • ಕಮೀಷನ್ ಪಡೆದು ನಾಲ್ವರು ಯುವತಿಯರಿಗೆ ವಂಚನೆ
  • ವೈಟ್‌ಫಿಲ್ಡ್‌ನಲ್ಲಿರುವ ಕಂಪನಿಗೆ ಹೋದಾಗ ಯುವತಿಯರಿಗೆ ಶಾಕ್
ಶಿವಮೊಗ: ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಪರಿಚಿತರು 5 ಲಕ್ಷ ರೂ. ಕಮೀಷನ್(Commission) ಪಡೆದು ನಾಲ್ವರು ಯುವತಿಯರಿಗೆ ವಂಚನೆ ಮಾಡಲಾಗಿದೆ. ಮಾಳೂರಿನ 25 ವರ್ಷದ ವಿದ್ಯಾರ್ಥಿನಿ ಮತ್ತು ಆಕೆಯ ಮೂರು ಸ್ನೇಹಿತರು ವಂಚನೆಗೆ ಒಳಗಾದವರು.
ಮಾ.18ರಂದು ವಿದ್ಯಾರ್ಥಿನಿಯ ಮೊಬೈಲ್ ನಂಬರ್‌(Mobile Number)ಗೆ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇವೆ. ಕೆಲಸ ಕೊಡಿಸಿದ ಬಳಿಕ ಆಫರ್ ಲೆಟರ್ ಬರಲಿದ್ದು, ತದನಂತರ ಕಮೀಷನ್ ಹಣವನ್ನು ನೀಡಬೇಕು ಎಂದಿದ್ದರು. ಅದನ್ನು ವಿದ್ಯಾರ್ಥಿನಿ ತನ್ನ ಮೂವರು ಸ್ನೇಹಿತರ ಬಳಿ ಹೇಳಿಕೊಂಡಿದ್ದು, ಅವರೂ ಅದಕ್ಕೆ ಒಪ್ಪಿಕೊಂಡಿದ್ದರು.
ಅದರಂತೆ ಕಂಪನಿ ಹೆಸರಲ್ಲಿ ಆನ್‌ಲೈನ್ ಮೂಲಕವೇ ಸಂದರ್ಶನ ನಡೆಸಿದ ವಂಚಕರು, ಹಂತ ಹಂತವಾಗಿ ಯುವತಿಯರು ಬ್ಯಾಂಕ್ ಖಾತೆಗೆ 5 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಬಳಿಕ ಬೆಂಗಳೂರಿನ ವೈಟ್‌ಫಿಲ್ಡ್‌ನಲ್ಲಿರುವ ಕಂಪನಿ(company)ಗೆ ಹೋದಾಗ ಯುವತಿಯರಿಗೆ ಶಾಕ್ ಆಗಿತ್ತು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಕಂಪನಿಯಲ್ಲಿ ನಿಮ್ಮ ಡೇಟಾ ನೋಂದಣಿ ಆಗಿಲ್ಲ ಎಂದು ವಾಪಸ್ ಕಳುಹಿಸಿದ್ದರು.
ಕೆಲಸ ಕೊಡಿಸುವುದಾಗಿ ಹೇಳಿದ್ದ ಅಪರಿಚಿತರ ನಂಬರ್‌ಗೆ ಕಾಲ್ ಮಾಡಿದಾಗ ಸ್ವಿಚ್‌ಆಫ್ ಆಗಿದ್ದು, ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.