ಶಿರಾಳಕೊಪ್ಪದಲ್ಲಿ ಏರ್ಪಡಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದ ಕರಪತ್ರವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯ ಡಾ. ಮಾನಸ ಬಿಡುಗಡೆ ಮಾಡಿದರು. ಡಿ.ಮಂಜುನಾಥ್​, ಕೆ.ಎಸ್​.ಹುಚ್ರಾಯಪ್ಪ, ಮಂಜಣ್ಣ ಮತ್ತಿತರರಿದ್ದರು. 
ಶಿವಮೊಗ್ಗ

ಜನರಲ್ಲಿ ಪುಸ್ತಕ ಪ್ರೀತಿ ಬೆಳೆಸುವುದು ಇಂದಿನ ತುರ್ತು ಅವಶ್ಯ

ಪ್ರಮುಖ ಮುಖ್ಯಾಂಶಗಳು

  • ಮನೆಗೊಂದು ಗ್ರಂಥಾಲಯ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ
  • ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯ ಡಾ.ಮಾನಸ ಅಭಿಮತ
  • ಪುಸ್ತಕ ಖರೀದಿಸಿ ಓದುವ ಸಂಸತಿ ಬೆಳೆಸಿ
ಶಿರಾಳಕೊಪ್ಪ:ಆಧುನಿಕತೆಯ ಭರಾಟೆ ಹಾಗೂ ಜಾಗತೀಕರಣದ ಪ್ರಭಾವದಿಂದ ಮನುಷ್ಯ ಮೂಲ ಸಾಂಸತಿಕ ಬೇರುಗಳಿಂದ ದೂರವಾಗುತ್ತಿದ್ದು, ಜನಸಾಮಾನ್ಯರಲ್ಲಿ ಮರೆಯಾಗುತ್ತಿರುವ ಪುಸ್ತಕ ಪ್ರೀತಿಯನ್ನು ಮರುಹುಟ್ಟುಹಾಕುವುದು ತುರ್ತು ಅಗತ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯ ಡಾ. ಮಾನಸ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಮನೆಗೊಂದು ಗ್ರಂಥಾಲಯ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಪುಸ್ತಕ ಖರೀದಿಸಿ ಓದುವ ಸಂಸತಿಯನ್ನು ಬೆಳೆಸುವ ಮಹತ್ವಾಕಾಂೆಯಿಂದ ಜಾರಿಗೆ ತಂದಿರುವ ಮನೆಗೊಂದು ಗ್ರಂಥಾಲಯ ಯೋಜನೆ ನಾಡಿನಾದ್ಯಂತ ಅತ್ಯಂತ ಪರಿಣಾಮಕಾರಿ ಹಾಗೂ ಕ್ರಾಂತಿಕಾರಿ ಹೆಜ್ಜೆಯಾಗಿ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.
ಯುವಜನತೆ ಮತ್ತು ಮಕ್ಕಳು ಮೊಬೈಲ್​, ಟಿವಿ, ಇಂಟರ್​ನೆಟ್​ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಓದುವ ಹವ್ಯಾಸ ಹಾಗೂ ಏಕಾಗ್ರತೆ ಣಿಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಪುಸ್ತಕಗಳು ಬದುಕಿಗೆ ಮಾರ್ಗದರ್ಶನ ನೀಡುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ವಿಶೇಷ ದಿನಗಳಲ್ಲಿ ಉತ್ತಮ ಪುಸ್ತಕ ಖರೀದಿಸುವ ಸಂಕಲ್ಪ ಮಾಡಬೇಕು. ಶುಭಸಮಾರಂಭಗಳಲ್ಲಿ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡುವ ಸಂಸತಿ ನಮ್ಮದಾಗಬೇಕು. ಬಾಲ್ಯದಲ್ಲೆ ಓದುವ ಹವ್ಯಾಸ ಬೆಳೆಸಿಕೊಂಡ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.
ಸಂಚಾಲಕ ಕೆ.ಎಸ್​.ಹುಚ್ರಾಯಪ್ಪ ಮಾತನಾಡಿ, ಕನ್ನಡ ಸಾಹಿತ್ಯದ ಶ್ರೀಮಂತ ಹಾಗೂ ಪ್ರಾಚಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಯಶಸ್ವಿಯಾಗಿ ದಾಟಿಸಲು ಪುಸ್ತಕಗಳನ್ನು ಮನೆಮನೆಗೂ ತಲುಪಿಸಬೇಕು. ನಗರಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣದಲ್ಲೂ ಓದುವ ಸಂಸತಿ ವಿಸ್ತರಿಸುವ ಮಹತ್ವದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಶಿಕಾರಿಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯ ನವೀನ್​ ಕುಮಾರ್​ ಮಾತನಾಡಿ, ನಿರಂತರ ಓದುವಿಕೆಯಿಂದ ವ್ಯಕ್ತಿಯ ಭಾಷಾ ಕೌಶಲ, ವಿಚಾರಶಕ್ತಿ ಹಾಗೂ ಕಠಿಣ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಲಿದೆ ಎಂದು ತಿಳಿಸಿದರು.
ಕಸಾಪ ಶಿರಾಳಕೊಪ್ಪ ಟಕದ ಅಧ್ಯ ಮಂಜಣ್ಣ, ಗೌರಮ್ಮ, ಪ್ರಶಾಂತ, ವಿಜಯಕುಮಾರ್​ ಮತ್ತಿತರರಿದ್ದರು.
ಪ್ರಸ್ತುತ ಶಿಣ ವ್ಯವಸ್ಥೆಯು ಕೇವಲ ಪರೀೆ ಮತ್ತು ಅಂಕಗಳಿಗೆ  ಸೀಮಿತವಾಗದೆ ಅರಿವಿನ ದಿಗಂತವನ್ನು ವಿಸ್ತರಿಸುವ ಪ್ರಬಲ ಸಾಧನ ಆಗಬೇಕು. ಮಕ್ಕಳಲ್ಲಿ ಸೃಜನಶೀಲತೆ, ವೈಾನಿಕ ಮನೋಭಾವ, ಸಾಹಿತ್ಯಾಸಕ್ತಿ ಬೆಳೆಸುವ ಹೊಣೆ ಪಾಲಕರು, ಶಿಕರು ಮತ್ತು ಇಡೀ ಸಮಾಜದ ಮೇಲಿದೆ. ಪ್ರತಿಯೊಂದು ಕುಟುಂಬವೂ ವರ್ಷಕ್ಕೆ ಕೆಲವು ಪುಸ್ತಕಗಳನ್ನು ಖರೀದಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು.
> ಡಿ.ಮಂಜುನಾಥ್​, ಕಸಾಪ ಜಿಲ್ಲಾಧ್ಯಕ್ಷ
ಉತ್ತಮ ಪುಸ್ತಕಗಳು ಮನುಷ್ಯನ ಆಲೋಚನಾ ಕ್ರಮ, ವಿಕಸಿತ ಚಿಂತನೆ ಹಾಗೂ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸುತ್ತವೆ. ಪ್ರತಿ ಮನೆ ಎಷ್ಟೇ ಚಿಕ್ಕದಾದರೂ ಸರಿ. ಒಂದು ಸಣ್ಣ ಗ್ರಂಥಾಲಯವಿದ್ದರೆ ಮನೆಯ ವಾತಾವರಣವೇ ಸಂಪೂರ್ಣವಾಗಿ ಬದಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಯುತ್ತದೆ. ಕುಟುಂಬದ ಎಲ್ಲ ಸದಸ್ಯರು ಬಿಡುವಿನ ವೇಳೆಯಲ್ಲಿ ಪುಸ್ತಕದೊಂದಿಗೆ ಬೆರೆತಾಗ ಸುಸಂಸತ ಹಾಗೂ ನೈಜ ಾನಾಧಾರಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ.
> ಡಾ. ಮಾನಸ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ