ರಿಪ್ಪನ್‌ಪೇಟೆ ಕೆಪಿಎಸ್‌ನಲ್ಲಿ ಏರ್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳು. 
ಶಿವಮೊಗ್ಗ

ವಿದ್ಯಾರ್ಥಿಗಳಲ್ಲಿ ವೈಚಾರಿಕ ಅರಿವು ವೃದ್ಧಿಸಿ

ರಿಪ್ಪನ್‌ಪೇಟೆ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಾಗ ವೈಚಾರಿಕ ಅರಿವು ವೃದ್ಧಿಯಾಗುತ್ತದೆ ಎಂದು ಬಿಆರ್‌ಸಿ ಮಂಜುಳಾ ಹೇಳಿದರು.

ರಿಪ್ಪನ್‌ಪೇಟೆ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಾಗ ವೈಚಾರಿಕ ಅರಿವು ವೃದ್ಧಿಯಾಗುತ್ತದೆ ಎಂದು ಬಿಆರ್‌ಸಿ ಮಂಜುಳಾ ಹೇಳಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಹೊಸನಗರ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಕಷ್ಟವೆಂದು ಭಾವಿಸುವ ಬಹಳಷ್ಟು ಮಕ್ಕಳು ಕಲಿಕೆಗೆ ಹಿಂದೇಟು ಹಾಕುತ್ತಾರೆ. ಅವರಲ್ಲಿರುವ ತಪ್ಪು ಅಭಿಪ್ರಾಯ ತೊಡೆದುಹಾಕಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮ ಯೋಜಿಸಿದೆ ಎಂದು ತಿಳಿಸಿದರು.

ಮಕ್ಕಳು ಸೃಜನಶೀಲರಾಗಲು ವಸ್ತು ಪ್ರದರ್ಶನ ಹಾಗೂ ನಾಟಕಗಳು ಸಹಕಾರಿ. ಹೊಸ ಆವಿಷ್ಕಾರದಲ್ಲಿ ಆಸಕ್ತಿ ವಹಿಸಿದಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಉತ್ತಮ ಪ್ರದರ್ಶನದೊಂದಿಗೆ ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆಯಾಗಿ ಎಂದು ಆಶಿಸಿದರು.

ಉಪಪ್ರಾಚಾರ್ಯ ಸುಧಾ ಹೆಗಡೆ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ಲತಾ, ಸಿಆರ್‌ಪಿ ಮಂಜುನಾಥ, ಎಸ್‌ಡಿಎಂಸಿ ಸದಸ್ಯ ಯೋಗೇಂದ್ರ, ಶಿಕ್ಷಕ ರಾಮಕೃಷ್ಣ ಇತರರಿದ್ದರು.

ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ರಿಪ್ಪನ್‌ಪೇಟೆ ಕೆಪಿಎಸ್ ಸಾತ್ವಿಕ್ ಮತ್ತು ತಂಡ ಪ್ರಥಮ, ಹೊಸನಾಡು ಸರ್ಕಾರಿ ಪ್ರೌಢಶಾಲೆ ಪ್ರಾರ್ಥನಾ ಮತ್ತು ತಂಡ ದ್ವಿತೀಯ, ಅಮೃತ ಕೆಪಿಎಸ್ ವರ್ಷಿತಾ ಮತ್ತು ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ವಿಜೇತರು: ವಿಜ್ಞಾನ ವಸ್ತು ಪ್ರದರ್ಶನ ವೈಯಕ್ತಿಕ ವಿಭಾಗದಲ್ಲಿ ಅಮೃತ ಕೆಪಿಎಸ್‌ನ ಡಿ.ಲೋಹಿತ್ ಪ್ರಥಮ, ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆಯ ಗಗನ್ ದ್ವಿತೀಯ, ಸರ್ಕಾರಿ ಪ್ರೌಢಶಾಲೆಯ ನಿಶಾಲ್ ತೃತೀಯ ಸ್ಥಾನ ಪಡೆದರು. ಗುಂಪು ವಿಭಾಗದಲ್ಲಿ ಅಮೃತ ಕೆಪಿಎಸ್‌ನ ಪ್ರಥಮ, ಗುರೂಜಿ ಇಂಟರ್‌ನ್ಯಾಷನಲ್ ದ್ವಿತೀಯ, ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದಿದೆ.