ಹೊಳೆಹೊನ್ನೂರು ಸಮೀಪದ ಡಿ.ಬಿ.ಹಳ್ಳಿ ಪದ್ಮದೀಪ ಪಬ್ಲಿಕ್ ಶಾಲೆಯಲ್ಲಿ ಶಾಲೆ ಸಂಸತ್ ಚುನಾಯಿತ ಪ್ರತಿನಿಧಿಗಳಾದ ಜೆ.ಪಿ.ಯಶಸ್, ಮೊಹಮ್ಮದ್ ಫರಾನ್, ಯುಕ್ತಾ ವಿ. ಸ್ವರ ಮತ್ತಿತರರು ಪ್ರತಿಜ್ಞಾವಿಧಿ ಸ್ವೀಕರಿಸಿದರು. 
ಶಿವಮೊಗ್ಗ

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿ | school Parliamentary Election

ಹೊಳೆಹೊನ್ನೂರು: ಶಾಲಾ ದಿನಗಳಲ್ಲಿಯೇ ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಬೇಕು. ಇದರಿಂದ ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಯಕರಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಪದ್ಮದೀಪ ಪಬ್ಲಿಕ್ ಶಾಲೆ ಪ್ರಾಚಾರ್ಯ ಕೆ.ತಂಗರಾಜು ಹೇಳಿದರು.
ಡಿ.ಬಿ.ಹಳ್ಳಿ ಗ್ರಾಮದ ಪದ್ಮದೀಪ ಶಾಲೆಯಲ್ಲಿ ಆಯೋಜಿಸಿದ್ದ ಸಂಸತ್ ಚುನಾವಣೆ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಹಾಗೂ ಆಡಳಿತದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಇರಬೇಕು. ಆಗ ಯಾವುದೇ ಅಹಿತರಕ ಘಟನೆ ಅಪರಾಧ ಪ್ರಕರಣಗಳು ಕಡಿಮೆ ಅಗಲು ಸಹಕಾರಿ ಆಗುತ್ತದೆ ಎಂದರು.
ಸಮಾಜ ವಿಜ್ಞಾನ ಶಿಕ್ಷಕ ಶಿವರಾಜ್ ಮಾತನಾಡಿ, ಸಂವಿಧಾನ, ಸರ್ಕಾರ ರಚನೆ ಹಾಗೂ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ನೀಡಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ಮಂತ್ರಿಮಂಡಲ ರಚಿಸಿ ಖಾತೆ ಹಂಚಿಕೆ ಮಾಡಲಾಯಿತು. ಜೆ.ಪಿ.ಯಶಸ್ (ಮುಖ್ಯಮಂತ್ರಿ), ಮೊಹಮ್ಮದ್ ಫರಾನ್ (ಉಪ ಮುಖ್ಯಮಂತ್ರಿ), ಯುಕ್ತಾ ವಿ. ಸ್ವರ (ಸಾಂಸ್ಕೃತಿಕ), ಸುಹಾಸ್ (ಕ್ರೀಡೆ), ಯಶ್ವಂತ್ (ಆರೋಗ್ಯ), ಹರ್ಷಿತ್ (ಗ್ರಂಥಾಲಯ ಮತ್ತು ವಾರ್ತಾ ಮಂತ್ರಿ), ಎಚ್.ಟಿ.ಮಿಥುನ್ (ಪರಿಸರ ಮತ್ತು ನೈರ್ಮಲ್ಯ) ಪ್ರತಿಜ್ಞಾವಿಧಿ ಸ್ವೀಕರಿಸಿದರು.