ಶಿಕಾರಿಪುರ ತಾಲೂಕು ಬೀದಿ ಬದಿ ವ್ಯಾಪಾರಿಗಳು ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು. ಕೃಷ್ಣಪ್ಪ, ಕಾವ್ಯಶ್ರೀ, ಮಣಿ ಗೌಡರ್, ಶ್ರೀನಿವಾಸ್, ಕರೀಂ ಸಾಬ್ ಇತರರಿದ್ದರು. 
ಶಿವಮೊಗ್ಗ

ಫುಡ್‌ಕೋರ್ಟ್ ನಿರ್ಮಾಣ ಅವೈಜ್ಞಾನಿಕ | Protest withdrawn

ಶಿಕಾರಿಪುರ: ಫುಡ್ ಕೋರ್ಟ್ ನಿರ್ಮಾಣ ಅವೈಜ್ಞಾನಿಕವಾಗಿದೆ. ಹಾಗಾಗಿ ವ್ಯಾಪಾರಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ರಸ್ತೆ ಬದಿ ವ್ಯಾಪಾರಿಗಳು ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆದರೆ ಮಂಗಳವಾರ ಸಂಸದ ಬಿ.ವೈ.ರಾಘವೇಂದ್ರ ಅವರು ಮೊಬೈಲ್‌ನಲ್ಲಿ ಮಾತನಾಡಿದ ನಂತರ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಬೀದಿ ಬದಿ ವ್ಯಾಪಾರಿಗಳು ಪ್ರತಿದಿನ ದುಡಿದು ಜೀವನ ನಿರ್ವಹಣೆ ಮಾಡುವವರು. ನಮಗೆ ಆಸರೆಯಾಗಲೆಂದು ಪುರಸಭೆಯಿಂದ ುಡ್‌ಕೋರ್ಟ್ ನಿರ್ಮಿಸಿದ್ದು, ಅದೂ ಕೂಡ ಅವೈಜ್ಞಾನಿಕವಾಗಿದೆ. ಇಲ್ಲಿ ಯಾವ ಮೂಲ ಸೌಕರ್ಯಗಳು ಇಲ್ಲದಿರುವುದರಿಂದ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು  ಸಂಘದ ಅಧ್ಯಕ್ಷ ಪಾನಿಪುರಿ ಕೃಷ್ಣಪ್ಪ ದೂರಿದರು.
ಮಾಜಿ ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಬೀದಿ ಬದಿ ವ್ಯಾಪಾರಸ್ಥರು ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ಮುಷ್ಕರ ನಿರತ ವ್ಯಾಪಾರಿಗಳಿಗೆ ಯುಗಾದಿ ಹಬ್ಬ ಮುಗಿಯುವವರೆಗೆ ಮುಷ್ಕರ ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಅಲ್ಲದೆ ಸ್ಥಳದಲ್ಲಿಯೇ ಸಂಸದ ಬಿ.ವೈ.ರಾಘವೇಂದ್ರ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿಸಿದಾಗ ಮುಷ್ಕರನಿರತರು ಸಂಸದರ ಮಾತಿಗೆ ಒಪ್ಪಿಗೆ ಸೂಚಿಸಿ ಮುಷ್ಕರ ಹಿಂಪಡೆದರು.
ಮಹಿಳಾ ಘಟಕದ ಅಧ್ಯಕ್ಷೆ ಕಾವ್ಯಶ್ರೀ, ಜಿಲ್ಲಾಧ್ಯಕ್ಷ ಮಣಿ ಗೌಡರ್, ಜಿಲ್ಲಾ ಸಂಚಾಲಕ ಶ್ರೀನಿವಾಸ್, ಉಪಾಧ್ಯಕ್ಷ ಕರೀಂ ಸಾಬ್, ಕಾರ್ಯದರ್ಶಿ ಸಂತೋಷ್ ದುದಾಳೆ, ಪ್ರಮುಖರಾದ ಕಾಟ್ನೂರ್ ರವಿ, ಇಡ್ಲಿ ಶೇಖರಪ್ಪ, ನಿರ್ದೇಶಕರು ಇತರರಿದ್ದರು.