ಮಳೆ ಗಾಳಿಯಿಂದ ಶಿವಮೊಗ್ಗ ಗ್ರಾಮಾಂತರದಲ್ಲಿ ಉಂಟಾಗಿರುವ ಹಾನಿಗೆ ತ್ವರಿತ ಪರಿಹಾರ ಒದಗಿಸುವಂತೆ ಬಿ.ವೈ.ರಾಘವೇಂದ್ರ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು. ಡಿ.ಎಸ್.ಅರುಣ್, ಕೆ.ಎನ್.ಜಗದೀಶ್, ಅಶೋಕ್ ನಾಯ್ಕ ಇತರರಿದ್ದರು. 
ಶಿವಮೊಗ್ಗ

ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಸರಿಪಡಿಸಿ I power connection

ಅರವಿಂದ ಅಕ್ಲಾಪುರ

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ತುಂಬಲಾಗದ ನಷ್ಟ
  • ಬಿಜೆಪಿ ಪ್ರಮುಖರ ನಿಯೋಗ ಮನವಿ
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಭಾನುವಾರ ರಭಸವಾದ ಗಾಳಿ ಹಾಗೂ ಭಾರಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ನೀಡಬೇಕು. ಕಡಿತಗೊಂಡ ವಿದ್ಯುತ್ ಸಂಪರ್ಕ (connection) ಸರಿಪಡಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra)ನೇತೃತ್ವದಲ್ಲಿ ಬಿಜೆಪಿ (bjp) ಪ್ರಮುಖರ ನಿಯೋಗ ಮಂಗಳವಾರ ಪ್ರಭಾರ ಜಿಲ್ಲಾಧಿಕಾರಿ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿತು.
ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಮರಗಳು ನೆಲಕ್ಕುರುಳಿವೆ. ರೈತರಿಗೆ ತುಂಬಲಾಗದ ನಷ್ಟವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ದುಸ್ತರವಾಗಿದೆ. ಅನೇಕ ಕಡೆ ಮರಗಳು, ಮನೆಗಳ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಮನೆಗಳ ಮೇಲ್ಛಾವಣಿ ಹಾರಿಹೋಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಹನುಮಂತಾಪುರ, ಕೈಮರ, ಮಲ್ಲಾಪುರ ಮೊದಲಾದೆಡೆ ಮನೆಯ ಮೇಲ್ಛಾವಣೆಯ ಶೀಟುಗಳು ಹಾರಿಹೋಗಿವೆ. ವಿದ್ಯುತ್ ಕಂಬಗಳು ಧರೆಗುರುಳಿದೆ. ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಪ್ರಾಣಾಪಾಯವಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್.ಜಗದೀಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಶಾಸಕ ಅಶೋಕ್ ನಾಯ್ಕ, ಪ್ರಮುಖರಾದ ಸಂತೋಷ್ ಬಳ್ಳೇಕೆರೆ, ರಾಜೇಶ್ ಕಾಮತ್, ಸುರೇಖಾ ಮುರಳೀಧರ್, ಮಾಲತೇಶ್, ಶಾಂತಾ ಸುರೇಂದ್ರ, ದೀನ್‌ದಯಾಳ್ ಇತರರಿದ್ದರು.