ರೌಡಿಶೀಟರ್ ನರಸಿಂಹನ ಹತ್ಯೆ ಪ್ರಕರಣದ ಆರೋಪಿಗಳನ್ನು ಕೋಟೆ ಠಾಣೆಗೆ ಪೊಲೀಸರು ಕರೆತಂದರು. 
ಶಿವಮೊಗ್ಗ

ರೌಡಿಶೀಟರ್ ಹತ್ಯೆ ಮಾಡಿದ್ದ ಐವರು ಪೊಲೀಸರಿಗೆ ಶರಣು | Rowdysheeter killed

ಪ್ರಮುಖ ಮುಖ್ಯಾಂಶಗಳು

  • ಗಾಂಧಿಬಜಾರ್‌ನ ಕರಿದೇವರ ಕೇರಿಯ ಒಂದನೇ ತಿರುವಿನಲ್ಲಿ ಘಟನೆ
  • ರೌಡಿಶೀಟರ್ ನರಸಿಂಹನ ಹತ್ಯೆ ಮಾಡಿದ್ದ ಐವರು ಆರೋಪಿಗಳು
  • ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದಲ್ಲಿ ಹೆಚ್ಚಿನ ವಿಚಾರಣೆ
ಶಿವಮೊಗ್ಗ: ನಗರದ ಗಾಂಧಿಬಜಾರ್‌ನ ಕರಿದೇವರ ಕೇರಿಯ ಒಂದನೇ ತಿರುವಿನಲ್ಲಿ ಶುಕ್ರವಾರ ಸಂಜೆ ನಡೆದಿದ್ದ ರೌಡಿಶೀಟರ್ ನರಸಿಂಹ ಹತ್ಯೆ(Rowdysheeter Narasimha killed) ಮಾಡಿದ್ದ ಐವರು ಕೋಟೆ ಠಾಣೆ ಪೊಲೀಸರಿಗೆ ಶರಣಾಗಿದ್ದಾರೆ. ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.
ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್ ಹಾಗೂ ಶಬರೀಶ್ ಪೊಲೀಸರಿಗೆ ಶರಣಾದವರು. ಶನಿವಾರ ಬೆಳಗ್ಗೆ ಆರೋಪಿಗಳನ್ನು ಕೋಟೆ ಪೊಲೀಸ್ ಠಾಣೆ(Kote Police Station)ಗೆ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದಲ್ಲಿ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಯಿತು.
ಪ್ರಕರಣದ ಗಂಭೀರತೆಯನ್ನು ಗಮನಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ.ಕಾರಿಯಪ್ಪ ನೇತೃತ್ವದಲ್ಲಿ ವಿಶೇಷ ತಂಡ(Special team) ರಚಿಸಲಾಗಿತ್ತು. ಆರೋಪಿಗಳನ್ನು ಪಲೀಸರು 24 ಗಂಟೆಯೊಳಗೆ ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಸಂಜೆ ಇಸ್ಪೀಟ್ ಅಡ್ಡೆಗೆ ಬಂದಿದ್ದ ದುಷ್ಕರ್ಮಿಗಳ ತಂಡ ನರಸಿಂಹನ ಮೇಲೆ ಮಾರಕಾಸಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಹಳೇ ವೈಷ್ಯಮ್ಯ ಕಾರಣ: ರೌಡಿಶೀಟರ್ ನರಸಿಂಹನ ಹತ್ಯೆ ಹಿಂದೆ ಹಳೇ ವೈಷಮ್ಯ(Old feud)ವಿದೆ ಎಂಬುದು ಪೊಲೀಸರ ತನಿಖೆಯಿಂದ ಮೇಲ್ನೋಟಕ್ಕೆ ದೃಢಪಟ್ಟಿದೆ. ಈ ಹಿಂದೆ ರೌಡಿಶೀಟರ್ ನರಸಿಂಹ, ಕತ್ತೆ ಕಾರ್ತಿಕ್ ಮೇಲೆ ದಾಳಿಗೆ ಯತ್ನಿಸಿದ್ದ. ಆ ದಾಳಿಯಿಂದ ಕಾರ್ತಿಕ್ ಬಚಾವಾಗಿದ್ದ. ಆ ಬಳಿಕ ದೂರವಾಣಿ ಮೂಲಕ ಕಾರ್ತಿಕ್‌ಗೆ ನರಸಿಂಹ ಆವಾಜ್ ಕೂಡ ಹಾಕಿದ್ದ. ಅದೇ ಸಿಟ್ಟಿನಿಂದ ದಾಳಿ ಮಾಡಲಾಗಿದೆ ಎನ್ನಲಾಗಿದೆ.