ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಕಿರುಹೊತ್ತಗೆಯನ್ನು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಬಿಡುಗಡೆಗೊಳಿಸಿದರು. ಮಧು ಬಂಗಾರಪ್ಪ, ದಿನೇಶ್ ಗೂಳಿಗೌಡ, ಡಾ. ಪುಷ್ಪಾ ಅಮರನಾಥ, ಬಲ್ಕಿಷ್ ಬಾನು, ಎಸ್.ಎನ್.ಚನ್ನಬಸಪ್ಪ, ಆರ್.ಎಂ.ಮಂಜುನಾಥ ಗೌಡ, ಚೇತನ್ ಗೌಡ, ಸಿ.ಎಸ್.ಚಂದ್ರಭೂಪಾಲ್, ಆರ್.ಪ್ರಸನ್ನಕುಮಾರ್, ಎಂ.ಶ್ರೀಕಾಂತ್, ಎಚ್.ಸಿ.ಯೋಗೇಶ್, ಎನ್.ಹೇಮಂತ್ ಇದ್ದರು. 
ಶಿವಮೊಗ್ಗ

ಪಂಚ ಗ್ಯಾರಂಟಿಗಳಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ । Five Guarantees

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿ ಜಿಲ್ಲಾಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ
  • ತಲಾ ಆದಾಯದಲ್ಲಿ ಹೆಚ್ಚಳ, ಜಿಡಿಪಿಯಲ್ಲೂ ಕರ್ನಾಟಕ ದೇಶದಲ್ಲೇ ಮುಂಚೂಣಿ
  • ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೇವಣ್ಣ ಹೇಳಿಕೆ
ಶಿವಮೊಗ್ಗ: ಪಂಚ ಗ್ಯಾರಂಟಿ(Guarantees)ಗಳಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿದೆ. ತಲಾ ಆದಾಯ(Per capita income)ದಲ್ಲಿ ಹೆಚ್ಚಳವಾಗಿದ್ದು, ಜಿಡಿಪಿ(Gdp)ಯಲ್ಲೂ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಸೇರಿ ವಿವಿಧ ಇಲಾಖೆಗಳು, ಶಿವಮೊಗ್ಗ ಜಿಲ್ಲಾ ಮತ್ತು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಆಶ್ರಯದಲ್ಲಿ ಜಿಲ್ಲಾಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ(Workshop)ದಲ್ಲಿ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 1,44,056 ಮೃತಪಟ್ಟವರ ಖಾತೆಗೆ ಗ್ಯಾರಂಟಿ ಯೋಜನೆ ಹಣ ಜಮಾ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ 2,336 ಮೃತಪಟ್ಟವರ ಖಾತೆಗೆ ಹಣ ಜಮಾ ಆಗಿದ್ದು, ಅದನ್ನು ವಾಪಸ್ ತರಿಸುವ ಕೆಲಸ ಆಗುತ್ತಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಗ್ಯಾರಂಟಿಗೆ ರಾಜ್ಯ ಸರ್ಕಾರ ಶಕ್ತಿ ಕೊಟ್ಟಿದೆ. ಐದೂ ಯೋಜನೆಗಳನ್ನು ನಾವು ಯಾವತ್ತೂ ವಿರೋಧ ಮಾಡಿಲ್ಲ. ಆದರೆ ಸಮರ್ಪಕವಾಗಿ ಜಾರಿ ಮಾಡುವಂತೆ ಒತ್ತಾಯ ಮಾಡಿದ್ದೇವೆ. ಸರ್ಕಾರದ ಯೋಜನೆಗಳು ಇನ್ನೂ ಸುಲಲಿತವಾಗಿ ತಲುಪಬೇಕು. ಗ್ಯಾರಂಟಿ ಸಮಾವೇಶ ಅವಲೋಕನವಾಗಬೇಕು. ಇಲ್ಲಿ ಯಾವುದೇ ರಾಜಕಾರಣ ಮಾಡಲ್ಲ. ಆದರೆ ಮತ್ತೊಂದಿಷ್ಟು ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆಗಳಿಂದ ತಲಾ ಆದಾಯ ಹೆಚ್ಚಳ

ಗ್ಯಾರಂಟಿ ಯೋಜನೆಗಳು ಜಾರಿಯೇ ಆಗಲ್ಲ. ರಾಜ್ಯ ದಿವಾಳಿ ಆಗುತ್ತದೆ. ಅಭಿವೃದ್ಧಿ ಕೆಲಸಕ್ಕೆ ಅನುದಾನ ಇರಲ್ಲ. ಇವು ಬಿಟ್ಟಿ ಭಾಗ್ಯಗಳೆಂದು ಹಲವರು ಜರಿದಿದ್ದರು. ಆದರೆ ವಾಸ್ತವವಾಗಿ ಗ್ಯಾರಂಟಿ ಎಂಬುದೇ ಅಭಿವೃದ್ಧಿಯಾಗಿದೆ ಎಂದು ಡಾ. ಎಚ್.ಪಿ.ವಾಸು ಹೇಳಿದರು. ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದ ಅವರು, ಗ್ಯಾರಂಟಿಗಳಿಂದ ತಲಾ ಆದಾಯ, ರೀಟೇಲ್(Retail) ಅಥವಾ ಎಫ್‌ಎಂಸಿಜಿ ಮಾರಾಟವೂ ಹೆಚ್ಚಾಗಿದೆ ಎಂದರು.