ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಮನೆ ಕಳೆದುಕೊಂಡ ಕುಟುಂಬಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೆರವು ನೀಡಿ ಸಾಂತ್ವನ ಹೇಳಿದರು. 
ಶಿವಮೊಗ್ಗ

ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು | helping hand

ತೀರ್ಥಹಳ್ಳಿ: ತಾಲೂಕಿನ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೇಬೈಲು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದಾಗಿ ಬೆಂಕಿಗಾಹುತಿಯಾದ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗುರುವಾರ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬಕ್ಕೆ ತುರ್ತು ಅಗತ್ಯವಿರುವ ದಿನಸಿ ಪದಾರ್ಥ ಹಾಗೂ ಒಂದಿಷ್ಟು ಸ್ಟೀಲ್ ಪಾತ್ರೆಗಳನ್ನು ನೀಡಿದರು. ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್ ಇಟ್ಟಿಗೆಗೆ ಹಣ ನೀಡುವ ಭರವಸೆ ನೀಡಿದರು. ದೂರವಾಣಿ ಮೂಲಕ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಒಂದು ಮನೆ ಮಂಜೂರು ಮಾಡುವಂತೆ ಮನವಿ ಮಾಡಿದರು.
ಪಕ್ಷದ ಪ್ರಮುಖರಾದ ಅಮರನಾಥ ಶೆಟ್ಟಿ, ದಿನೇಶ್ ಹುಲ್ಲತ್ತಿ, ಅಗ್ರಹಾರ ಹೋಬಳಿಯ ಪಕ್ಷದ ಮುಖಂಡರು ಇದ್ದರು.